ವಿಧಾನಸೌಧ-ವಿಕಾಸಸೌಧಕ್ಕೆ ಹೈ ಟೈಕ್ನಾಲಜಿ ಭದ್ರತೆ..

ಬೆಂಗಳೂರು: ಶಕ್ತಿ ಸೌಧವಾದ ವಿಧಾನಸೌಧದ ಇತ್ತೀಚಿಗೆ ಭದ್ರತಾ ಲೋಪ ಭಾರಿ ಚರ್ಚೆಗೆ ಕಾರಣವಾಗಿತ್ತು. ಅನಾಮಧೇಯ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಕಲಾಪದ ನಡುವೆ ಕಾಣಿಸಿಕೊಂಡಿದ್ದು ಭದ್ರತಾ ಲೋಪವನ್ನು ಎತ್ತಿ ಹಿಡಿದಿತ್ತು. ಈ ರೀತಿಯ ಭದ್ರತಾ ಲೋಪದಿಂದಮುಜುಗರಕ್ಕೀಡಾದ ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದ್ದು, ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಭಾರಿ ಭದ್ರತೆ ಕೈಗೊಳ್ಳಲು ಮುಂದಾಗಿದೆ..
ಹೊಸ ಭದ್ರತಾ ಕ್ರಮದ ಮುಖಾಂತರ ಪಾರ್ಲಿಮೆಂಟ್ನ ತಂತ್ರಜ್ಞಾನವನ್ನೂ ಬಳಸಲು ಸರ್ಕಾರ ಮುಂದಾಗಿದ್ದು, ಮೂರು ಹಂತಗಳ ಭದ್ರತಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಮೂಲಕ ಹೈ ಟೈಕ್ನಾಲಜಿ ಆಧರಿತ ಟೈಟ್ ಬಂದೋಬಸ್ತ್ ಮಾಡಲು ಮುಂದಾಗಿದ್ದು, ಅಪರಿಚಿತರು ಅಥವ ಶಂಕಿತರು ಯಾವುದೇ ರೀತಿ ಎಂಟ್ರಿ ಕೊಡದಂತೆ ತಡೆಯಲು ತಯಾರಿ ನಡೆಸಿದೆ.
ವಿಧಾನಸೌಧ ಹಾಗೂ ವಿಕಾಸಸೌಧ ಒಳ ಪ್ರವೇಶಕ್ಕೆ ಮೂರು ಸುತ್ತಿನ ಭದ್ರತೆ ಕೈಗೊಳ್ಳಲಾಗುತ್ತಿದೆ. ಬರುವವರಿಗೆ ಲೇಸರ್ ಐಡೆಂಟಿಟಿ ಸೆನ್ಸಿಟಿವ್ ಐಡಿ ಕಾರ್ಡ್ ನೀಡಲಾಗುತ್ತಿದೆ..
ಈ ಮೂಲಕ ಅನುಮತಿ ಇದ್ದವರಿಗೆ ಐಡಿ ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ. ಬಳಿಕ ಹೈ-ಅಂಡ್ ಸಿಸಿಟಿವಿ ಕ್ಯಾಮರಾ, ಕಂಟ್ರೋಲ್ ರೂಂ, ಸ್ಕ್ಯಾನರ್ಗಳಿಂದ ಸಹ ನಿಗಾ ವಹಿಸಲಿದ್ದು, ಒಳಗೆ ಪ್ರವೇಶಿಸಲು ವಿಸಿಟರ್ಗಳಿಗೆ ಸ್ಮಾರ್ಟ್ ಪಾಸ್ ಕಡ್ಡಾಯವಾಗಿ ಇರಬೇಕಾಗಿದೆ..
ಅಂತಿಮವಾಗಿ ಪಾರ್ಲಿಮೆಂಟ್ನಲ್ಲಿರುವ ರೇಡಿಯೋ ಫ್ರೀರ್ಕ್ಯೂನ್ಸಿ ಐಡೆಂಟಿಫಿಕ್ಯೂಷನ್ವುಳ್ಳ ಅತ್ಯಾಧುನಿಕ ತಂತ್ರಜ್ಞಾನವನ್ನು ಸಹ ಬಳಕೆಗೆ ಸರ್ಕಾರ ಪ್ಲ್ಯಾನ್ ಮಾಡಿದೆ. ಇನ್ನು ಈ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು 15-20 ದಿನಗಳಲ್ಲಿ ಮಾಡುವಂತೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸಲಹೆ ಮಾಡಿದ್ದಾರೆ..