ಬಿಜೆಪಿಯವರೇನು ಸಾಚಾಗಳಲ್ಲ ಎಂದ ಪ್ರಮೋದ್ ಮುತಾಲಿಕ್…

ಹುಬ್ಬಳ್ಳಿ: ಬಿಜೆಪಿಯವರು ಕಾಮಕುಮಾರ ಸ್ವಾಮೀಜಿ ಹತ್ಯೆ ಕೇಸ್ ಸಿಬಿಐಗೆ ಕೊಡಬೇಕು ಅಂತಾರೆ. ಆದರೆ ಅವರು ಸಾಚಾಗಳಲ್ಲ. ಸಿಬಿಐ ಅನ್ನೋದು ಬುರಡೆ, ಇವರು ಅಧಿಕಾರದಲ್ಲಿದ್ದಾಗ ಕೊಲೆ ಕೇಸ್‌ಗಳನ್ನು ಸಿಬಿಐಗೆ ಕೊಟ್ಟರು ಏನಾಯ್ತು?. 22 ಕೇಸ್‌ಗಳಿಗೆ ನ್ಯಾಯ ಸಿಕ್ಕಿದೆಯಾ ಎಂದು ವರೂರಿನ ಗುಣಧರನಂದಿ ಸ್ವಾಮೀಜಿ ಬಳಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು…
ಚಿಕ್ಕೋಡಿಯ ಜೈನ ಮುನಿ ಕಾಮಕುಮಾರ ಸ್ವಾಮೀಜಿ ಹತ್ಯೆ ಹಿನ್ನಲೆ ಪ್ರಮೋದ್ ಮುತಾಲಿಕ್ ಅವರು ವರೂರ ಜೈನ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಈ ಪ್ರಕರಣವನ್ನು ಇದೀಗ ಸಿಬಿಐಗೆ ವಹಿಸಿ ಅಂತೀದಾರೆ. ಇವರೇನು ಸಾಚಾಗಳಾ? ಎಂದು ಪ್ರಶ್ನಿಸಿದರು. ಹಾಗೆಯೇ ರಾಜಕಾರಣಿಗಳು ನಿರ್ಲಜ್ಜರು, ನಾನು ಹಿಂದೂತ್ವ ಉಳಿಸಲು ರಾಜಕಾರಣಕ್ಕೆ ಬಂದವನು ಎಂದರು…
ಚಿಕ್ಕೋಡಿಯ ಜೈನ್ ಮುನಿ ಕಾಮಕುಮಾರ ಮಹಾರಾಜರ ಹತ್ಯೆ ಹಿಂದೆ ದೊಡ್ಡದೊಂದು ಕೈವಾಡ ಇದೆ. ಹತ್ಯೆ ಮಾಡಿದವರಿಗೆ ಉತ್ತರ ಪ್ರದೇಶ ಯೋಗಿ ಮಾದರಿಯಲ್ಲಿ ಅವರಿಗೆ ಶಿಕ್ಷೆಯಾಗಬೇಕು. ಮತ್ತು ಅವರ ಆಸ್ತಿಯನ್ನು ಜಪ್ತಿ ಮಾಡಬೇಕು. ಬುಲ್ಡೋಜರ್ ಹತ್ತಿಸಿ ಅವರ ಮೂರು ಮನೆಗಳನ್ನು ನೆಲಸಮ ಮಾಡಬೇಕು,” ಎಂದು ಒತ್ತಾಯಿಸಿದರು..
ವರೂರ ಜೈನ ಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗಲೇ ಅದೆಷ್ಟೋ ಹತ್ಯೆಗಳಾಗಿವೆ. ಸಿಬಿಐ ತನಿಖೆಗೂ ವಹಿಸಿದ್ದರು. ಆದರೆ ಏನು ಪ್ರಯೋಜನ ಆಗಲಿಲ್ಲ. ಆ ಆರೋಪಿಗಳಿಗೆ ಜಾಮೀನು ಕೊಡಲು ಯಾರು ಸಾಥ್ ನೀಡಬಾರದೆಂದು ಎಲ್ಲ ವಕೀಲರ ಸಂಘಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಹಾಗೆಯೇ ಜೈನ ಮುನಿ ಹತ್ಯೆಯನ್ನು ಪೊಲೀಸ್ ತನಿಖೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ ಎಂದರು…