ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ತಾಯಿ

ಬೆಳಗಾವಿ: ಹೆತ್ತ ತಾಯಿ ತನ್ನ ಮಗಳೆನ್ನೇ ನೇಣು ಬಿಗಿದು ಹತ್ಯೆ ಮಾಡಿದ್ದಲ್ಲದೆ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ದಿಂಡಲಕೊಪ್ಪ ಗ್ರಾಮದಲ್ಲಿ ನಡೆದಿದೆ..
ತವರು ಮನೆಯಲ್ಲಿ ಐದಾರು ವರ್ಷಗಳಿಂದ ಜೀವನ ಸಾಗಿಸುತ್ತಾ ಬಂದಿದ್ದ ಮಹಾದೇವಿ ನಾಯ್ಕಪ್ಪ ಇಂಚಲ 35 ಎಂಬಾಕೆಗೆ ಅವರ ಸಹೋದರ ರಂಗಪ್ಪ ಬಿಲ್ಲ್ಯಾರ ಹಾಗೂ ಪತ್ನಿ ಅನ್ನಪೂರ್ಣ ರಂಗಪ್ಪ ಬಿಲ್ಲ್ಯಾರ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ತಿಳಿದು ಬಂದಿದೆ. .
ಈ ಹಿನ್ನಲ್ಲೆಯಲ್ಲಿ ಮಾಹಾದೇವಿ ತನ್ನ ಮಗಳಾದ ಚಾಂದನಿ ಇಂಚಲ 6 ನೇಣು ಬಿಗಿದು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.