ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರನ್ನು ಬೇಟಿ ಮಾಡಿದ ಮಾಜಿ ಶಾಸಕ ಅನಿಲ ಬೆನಕೆ

ಬೆಳಗಾವಿ 11 :ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರನ್ನು ಬೇಟಿ ಮಾಡಿದ ಮಾಜಿ ಶಾಸಕ ಅನಿಲ ಬೆನಕೆ :
ದಿನಾಂಕ 10.07.2023 ರಂದು ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕರಾದ ಅನಿಲ ಬೆನಕೆರವರು ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ ಸಾವಂತ ಅವರನ್ನು ಅವರ ಕಾರ್ಯಾಲಯದಲ್ಲಿ ಬೇಟಿಯಾಗಿ ಬೆಳಗಾವಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಗೋವಾ ವಿಮಾನ ನಿಲ್ದಾಣಕ್ಕೆ ಎಸಿ/ವೋಲ್ವೋ ಬಸ್ ಸೇವೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು.
ಅನಿಲ ಬೆನಕೆ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ತ್ವರಿತವಾಗಿ ಬೆಳಗಾವಿ ಮತ್ತು ಗೋವಾ ನಡುವೆ ಬಸ್ ಸೇವೆಯನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆಯನ್ನು ನೀಡಿದರು ಎನ್ನಲಾಗಿದೆ.