Belagavi News In Kannada | News Belgaum

ಜನಸಂಖ್ಯೆ ನಿಯಂತ್ರಣ ಅರಿವು ಅಗತ್ಯ : ಶ್ರೀ ಜಿ.ಎ.ಕರಗುಪ್ಪಿ

ಹುಕ್ಕೇರಿ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುಕ್ಕೇರಿ, ಮಹಿಳಾ ಕಲ್ಯಾಣ ಸಂಸ್ಥೆಯನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ಇವರುಗಳ ಸಂಯುಕ್ತಆಶ್ರಯದಲ್ಲಿ ಹುಕ್ಕೇರಿ ಪಟ್ಟಣದ ವಿರಕ್ತಮಠದಲ್ಲಿ ವಿಶ್ವಜನಸಂಖ್ಯಾ ದಿನಾಚರಣೆ ಅಂಗವಾಗಿ ಗ್ರಾಮೀಣ ಭಾಗದ ಕಿಶೋರಿಯರಿಗೆ ಚರ್ಚಾ ಸ್ಪರ್ಧೆಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಿಮಿಸಿದ್ದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಜಿ.ಎ.ಕರಗುಪ್ಪಿ ಮಾತನಾಡಿ, ನವ ವಿವಾಹಿತರುಕುಟುಂಬ ಯೋಜನಾ ವಿಧಾನಗಳ ಬಗ್ಗೆ ಸ್ಥಳೀಯ ಆರೋಗ್ಯ ಸಂಸ್ಥೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬೇಕು.

ಕಿಶೋರಿಯರಿಗೆ ಜನಸಂಖ್ಯೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯತೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕಡಿಮೆಯಾಗದ ಬಾಲ್ಯವಿವಾಹ, ಲಿಂಗ ಅಸಮಾನತೆ, ಲೈಂಗಿಕ ಶೋಷಣೆ ಬಗ್ಗೆ ಮಾತನಾಡಿದರು.

ಕರ್ನಾಟಕ ಪಬ್ಲಿಕ್ ಶಾಲೆ, ಯರಗಟ್ಟಿಯ ಕಿರಣ ಚೌಗಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳಾ ಕಲ್ಯಾಣ ಸಂಸ್ಥೆಯು “ಸಖಿ” ಯೋಜನೆಯಡಿ ಕಿಶೋರಿಯರಿಗಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಜನಸಂಖ್ಯಾ ನಿಯಂತ್ರಣ, ಬಾಲ್ಯವಿವಾಹ, ಮಹಿಳೆಯರ ಮತ್ತು ಮಕ್ಕಳ ಮಾರಾಟ, ಲಿಂಗ ತಾರತಮ್ಯಇತ್ಯಾದಿ ವಿಷಯಗಳ ಬಗ್ಗೆ ನಿರಂತರವಾಗಿಅರಿವು ಮೂಡಿಸುತ್ತಿದೆ ಎಂದರು. ಭಾಷಣ ಸ್ಪರ್ಧೆಯಲ್ಲಿ ಹುಕ್ಕೇರಿತಾಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಜಿ.ಎಚ್.ಎಸ್. ಅವರಗೋಳ ಶಾಲೆಯ ಕುಮಾರಿ.ಲಲಿತಾ ಓಂಕಾರ, ದ್ವಿತೀಯ ಸ್ಥಾನವನ್ನು ಜಿ.ಎಸ್.ಎಸ್.ಶಿರಗಾಂವ ಶಾಲೆಯ ಕುಮಾರಿ.ಸುಮಾ ಪಂತೋಜಿ ಹಾಗೂ ಬಿ.ಎಮ್.ಅಮ್ಮಣಗಿ ಶಾಲೆಯ ಕುಮಾರಿ.ಸೃಷ್ಠಿ ಭೂಸನ್ನವರ, ತೃತೀಯ ಸ್ಥಾನವನ್ನು ಜಿ.ಎಚ್.ಎಸ್. ಹುಲ್ಲೋಳಿ ಶಾಲೆಯ ಕುಮಾರಿ.ಅರ್ಚನಾ ತಂಗಡಿ ಹಾಗೂ ಸಮಾಧಾನಕರ ಬಹುಮಾನವನ್ನು ಬಿ.ಎಮ್. ಅಮ್ಮಣಗಿ, ಗುಡಸ ಶಾಲೆಯ ವರ್ಷ ಹೊನ್ನಾಗೋಳ ಹಾಗೂ ಜಿ.ಎಚ್.ಎಸ್.ಅಮ್ಮಣಗಿ ಶಾಲೆಯ ಕುಮಾರಿ ಲಕ್ಷ್ಮೀ ವಾಳಕಿ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಶ್ರೀ. ಜಿ.ಎ.ಕರಗುಪ್ಪಿ ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ, ಶಿಕ್ಷಕರಾದ ಎ.ಬಿ. ಗೋಢಗೇರಿ, ಶ್ರೀ ಕಿರಣ ಚೌಗಲಾ ಪ್ರಾಚಾರ್ಯರು ಕರ್ನಾಟಕ ಪಬ್ಲಿಕ್ ಸ್ಕೂಲ್, ಯರಗಟ್ಟಿ ಇವರುಗಳು ಭಾಗವಹಿಸಿದ್ದರು. ಕೊನೆಗೆ ಸುಗಂಧಾ ಅಲ್ಲೋಟ್ಟಿ ವಂದನಾರ್ಪನೆ ಮಾಡಿದರು.