Belagavi News In Kannada | News Belgaum

ನಗರ ನೂತನ ಪೊಲೀಸ್ ಆಯುಕ್ತರಾಗಿ ಎಸ್.ಎನ್.ಸಿದ್ದರಾಮಪ್ಪ ನೇಮಕ.

ಬೆಂಗಳೂರು: ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ನಾಲ್ಕು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ..

 

ಬೆಳಗಾವಿ ನಗರ ಪೊಲೀಸ್​ ಆಯುಕ್ತರನ್ನಾಗಿ ಎಸ್​ ಎನ್​ ಸಿದ್ದರಾಮಪ್ಪ ಅವರನ್ನು ನೇಮಿಸಲಾಗಿದೆ. ಇವರು ಬೆಂಗಳೂರಿನಲ್ಲಿರುವ ಪೊಲೀಸ್​ ಮುಖ್ಯ ಕಚೇರಿಯಲ್ಲಿ ಐಜಿಪಿ ಆಗಿದ್ದರು..

 

ವರ್ತಿಕಾ ಕಟಿಯಾರ್-SCRB ಯಿಂದ SP ISDಗೆ ವರ್ಗಾವಣೆ, ಸಿರಿಗೌರಿ-ಎಸ್ಪಿ ISD ಯಿಂದ ಡಿಸಿಪಿ ಆಡಳಿತ ವಿಭಾಗಕ್ಕೆ ವರ್ಗಾವಣೆ ಅನೂಪ್ ಶೆಟ್ಟಿ ಸಿಐಡಿಗೆ ವರ್ಗಾವಣೆ,

ಅನೂಪ್ ಶೆಟ್ಟಿ ಅವರು ಬಿಟ್ ಕಾಯಿನ್ ಹಗರಣ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಪ್ರಮುಖ ಅಧಿಕಾರಿಯಾಗಿದ್ದಾರೆ..

ಕಳೆದ ತಿಂಗಳು ಅಲೋಕ್ ಕುಮಾರ್​ ಸೇರಿದಂತೆ ನಾಲ್ವರು IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು..

ಇದಕ್ಕೂ ಮುನ್ನ ಆರು ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಮತ್ತು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿತ್ತು..