Belagavi News In Kannada | News Belgaum

ಜು.24 ರಂದು ಬೃಹತ್ ಪ್ರತಿಭಟನೆ: ಮಲ್ಲಿಕಾರ್ಜುನ ಹುಂಬಿ.

ಬೈಲಹೊಂಗಲ -ರೈತರ ಸಂಕಷ್ಟಕ್ಕೆ ಸ್ಪಂಧಿಸಿ ಬರಪೀಡಿತ ತಾಲೂಕು ಗಳೆಂದು ಘೋಷಣೆ ಮಾಡುವಂತೆ ಸದನದಲ್ಲಿ ಶಾಸಕರುಗಳು ಸದ್ದು ಮಾಡಲಿ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಹುಂಬಿ ಆಗ್ರಹಿಸಿದರು..

 

ಪಟ್ಟಣದ ನಿರೀಕ್ಷಿಣಾ ಮಂದಿರದಲ್ಲಿ  ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸಕಾಲಕ್ಕೆ ಮುಂಗಾರು ಮಳೆ ಬಾರದಿರುವ ಹಿನ್ನೆಲೆ ಬೈಲಹೊಂಗಲ, ಸವದತ್ತಿ, ಕಿತ್ತೂರ ಭಾಗದ ಅನ್ನದಾತರು ಸಂಕಷ್ಟಕ್ಕೆ ಒಳಗಾಗಿದ್ದಾರೆ..

 

ಸರಿಯಾದ ಸಮಯಕ್ಕೆ ಮುಂಗಾರು ಮಳೆ  ಬಾರದಿರುವುದರಿಂದ ಈ ಭಾಗದ ರೈತರು ಬಿತ್ತಿರುವ  ಸೋಯಾಬಿನ್, ಹತ್ತಿ,ಉದ್ದು, ಹೆಸರು ಸೇರಿದಂತೆ ಮುಂಗಾರು ಬೆಳೆಗಳು ಮೊಳಕೆ ಒಡೆಯದೆ ಕಮರಿ ಹೋಗಿದೆ..

 

ಸಾವಿರಾರು ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಈಗ ಸಂಕಷ್ಟದಲ್ಲಿದ್ದಾರೆ.

ಈಗಾಗಲೇ ಹಲವಾರು ಬಾರಿ ಈ ಭಾಗದ ರೈತ ಮುಖಂಡರು, ಗಣ್ಯರು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು ಕೂಡ ಸರಕಾರಕ್ಕೆ ರೈತರ ಮೇಲೆ ಕರುಣೆ ಇಲ್ಲದಂತಾಗಿದೆ..

 

ರೈತರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಬೈಲಹೊಂಗಲ, ಸವದತ್ತಿ, ಕಿತ್ತೂರ ಭಾಗದ ವಿವಿಧ ರೈತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಜು.24 ರಂದು  ಬೈಲಹೊಂಗಲ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಮೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವುದು,.

 

ಸಮಯಕ್ಕೆ ಸರಿಯಾಗಿ ರೈತರ ಹೊಲಗಳಿಗೆ ವಿದ್ಯುತ್ ಪೂರೈಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು  ಮುಂದಿಟ್ಟುಕೊಂಡು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾರಣ ಸಹಸ್ರ ಸಂಖ್ಯೆಯಲ್ಲಿ  ರೈತ ಬಾಂಧವರು ಆಗಮಿಸಿ ಸರಕಾರಕ್ಕೆ ಚಾಟಿ ಬೀಸುವ ಕೆಲಸಕ್ಕೆ ಕೈ ಜೋಡಿಸಬೇಕೆಂದು ತಿಳಿಸಿದರು..

 

ಯಲ್ಲಪ್ಪಾ ಕರಡಿಗುಡ್ಡಿ, ಶಿವಬಸಪ್ಪ ಮದ್ನಳ್ಳಿ, ಬಸಯ್ಯ ತಿಪ್ಪಯ್ಯನವರ, ಬಸವರಾಜ  ಹಿತ್ತಲಮಣಿ, ಬಸಪ್ಪ ಚಳಕೊಪ್ಪ, ಗೌಡಪ್ಪ ನಾವಲಗಟ್ಟಿ,ಮಡಿವಾಳಪ್ಪ ಹಿರೇಹೊಳಿ,.

 

ವಿರೇಶಪ್ಪ ಚಳಕೊಪ್ಪ, ಮಹೇಶ ಕಾದ್ರೊಳ್ಳಿ, ಬಸವರಾಜ ಹಣ್ಣಿಕೇರಿ, ಮಲ್ಲೇಶಪ್ಪ ಬಿಡಶೆಟ್ಟಿ,ಸೋಮಪ್ಪ ಹುಂಬಿ,ಲಕ್ಕಪ್ಪ ಗುಂಡಿ, ದೇಮನಗೌಡ ಪಾಟೀಲ, ಅರ್ಜುನ ಪಡೆನ್ನವರ,ಚನ್ನಬಸಪ್ಪ ಪಾಟೀಲ, ಸಿದ್ದಪ್ಪ ಚಂಡು, ಅದೃಶ್ಯ ಕಲ್ಲೂರ, ಸಂದೀಪ ಬಡಿಗೇರ,

ಸೇರಿದಂತೆ ರೈತ ಮುಖಂಡರು ಇದ್ದರು..