Belagavi News In Kannada | News Belgaum

ರೋಟರಿ ಸಂಸ್ಥೆಯ ವತಿಯಿಂದ ಸಸಿ ನೆಡುವ ಅಭಿಯಾನ

ಬೆಳಗಾವಿ.ಜುಲೈ. ರೋಟರಿ ಕ್ಲಬ್ ಆಫ್ ಬೆಳಗಾವಿ ಸೌಥ ವತಿಯಿಂದ ಜುಲೈ 12 ರಂದು ಎಂ.ಎಲ್.ಆರ್.ಸಿ. ಯ ರೋಹಿಡೇಶ್ವರ ತರಬೇತಿ ಶಿಬಿರದಲ್ಲಿ ಸಸಿ ನೆಡವು ಅಭಿಯಾನವನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸುಮಾರು 500 ಸಸಿಗಳನ್ನು ನೆಡಲಾಯಿತು. ಮರಗಳನ್ನು ಕಡಿಯುವದರಿಂದ ಇಂದು ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟರು ಕಾಡು ಪ್ರದೇಶ ಬೆಳೆದು ಉತ್ತಮ ಮಳೆಯಾಗಬಹುದು. ಆದ್ದರಿಂದ ಸಸಿ ನೆಡುವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ರೋಟರಿ ಕ್ಲಬ್ ಆಫ್ ಬೆಳಗಾವಿ ಸೌಥ ವತಿಯಿಂದ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಗಿಡಗಳನ್ನು ನೆಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ವಿಜಯ ದರಗಶೆಟ್ಟಿ ಅವರು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅರಣ್ಯ ಇಲಾಖೆಯ ಡಿಆರ್.ಎಫ್.ಓ. ನಾಗರಾಜ ನಿರ್ವಾಣಿ ಅವರು ಆಗಮಿಸಿದ್ದರು. ರೋಟರಿ ಸಂಸ್ಥೆಯ ಹೇಮಂತ ಕಾಮತ, ಗೋವಿಂದ ಮಿಸಾಳೆ, ವಿನೋದ ಕುಮಠೇಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.