Belagavi News In Kannada | News Belgaum

ಯಮಕನಮರಡಿ ಪೊಲೀಸ್ ಠಾಣೆ ಪೊಲೀಸರು ಮನೆಗಳ್ಳನ ಬಂಧನ ನಗದು ಬಂಗಾರ ಹಣ ವಶ

ಯಮಕನಮರಡಿ: ಮನೆಗಳ್ಳನ ಬಂಧನ 658,800 ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಮತ್ತು 640 ಗ್ರಾಂ ತೂಕದ 44800/- ರೂ ಕಿಮ್ಮತ್ತಿನ ಬೆಳ್ಳಿಯ ಆಭರಣಗನ್ನು ವಶಪಡಿಸಿಕೊಂಡಿ ಯಮಕನಮರಡಿ ಪೋಲಿಸರು.

ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೋಲಿಸರ ಕಾರ್ಯವೈಖರಿಗೆ ಸಾರ್ವಜನಿಕರು ಶಹಾಭಾಷ ಎಂದಿದ್ದಾರೆ. ದಿನಾಂಕ 04-06-2023 ರಂದು ಶ್ರೀ ಪಾರೇಸ ಭರಮಪ್ಪಾ ಅಕ್ಕತಂಗೇರಹಾಳ ಸಾಃ ಹೊಸೂರ ಇವರು ಪೊಲೀಸ ಠಾಣೆಗೆ ಹಾಜರಾಗಿ ದಿನಾಂಕ 29-05-2023 ರಂದು ಮದ್ಯಾಹ್ನ 12 ಗಂಟೆಯಿಂದಾ 16:00 ಗಂಟೆ ನಡುವಿನ ಅವಧಿಯಲ್ಲಿ ಹೊಸೂರ ಗ್ರಾಮದ ಕೀಲಿ ಹಾಕಿದ ಮನೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿ ಮನೆಯಲ್ಲಿ ಇದ್ದ 25 ಗ್ರಾಂ ತೂಕದ ಬೆಳ್ಳಿಯ 2 ಆಭರಣಗಳನ್ನು ಮತ್ತು 290 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಹೀಗೆ ಒಟ್ಟು 116000/- ರೂ ಕಿಮ್ಮತ್ತಿನ ವಸ್ತುಗಳನ್ನು ಮತ್ತು ರೋಖ ಹಣ 32000/- ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ತಪಾಸ ಆಗ ಬೇಕು ಅಂತಾ ಕೊಟ್ಟ ಫಿರ್ಯಾದಿಯನ್ನು ಯಮಕನಮರಡಿ ಪೊಲೀಸ ಠಾಣೆ ಅಪರಾಧ ಸಂಖ್ಯೆ 124/2023 ಕಲಂ 454,380 ಐ.ಪಿ.ಸಿ ನೇದ್ದಕ್ಕೆ ಪ್ರಕರಣ ದಾಖಲ ಮಾಡಿಕೊಂಡು ಶ್ರೀ ಶಿವು ಮಣ್ಣಿಕೇರಿ ಪಿ.ಎಸ್.ಐ ಮತ್ತು ಅವರ ತನಿಖಾ ತಂಡದ ಸದಸ್ಯರಾದ ವಾಯ್.ಡಿ ಗುಂಜಗಿ,ಎಸ್.ಟಿ ಪೂಜೇರಿ, ಎಸ್‌.ಎ ಶೇಖ, ಶಂಕರ ಚೌಗಲಾ, ಎಲ್.ಬಿ.ಹಮಾಣಿ, ಸತೀಶ ರಡ್ಡಿ, ಪಿ.ಡಿ ಗವಾಣಿ.ಎಸ್.ಎ ಘೋಲಿ, ಪಿ.ಬಿ.ಗಾಡಿವಡ್ಡರ, ಇವರು ಕೂಡಿ ರಮೇಶ್ ಛಾಯಾಗೋಳ, ಪಿ.ಐ ಯಮಕನಮರಡಿ ಮತ್ತು ಡಿ.ಹೆಚ್.ಮುಲ್ಲಾ ಡಿ.ಎಸ್.ಪಿ ಗೋಕಾಕ ಮತ್ತು ಶ್ರೀ ವೇಣುಗೋಪಾಲ ಹೆಚ್ಚುವರಿ ಎಸ್.ಪಿ ಸಾಹೇಬರು ಬೆಳಗಾವಿ ಜಿಲ್ಲೆ ಮತ್ತು ಶ್ರೀ ಸಂಜೀವ ಪಾಟೀಲ ಎಸ್.ಪಿ ಸಾಹೇಬರು ಬೆಳಗಾವಿ ಜಿಲ್ಲೆರವರ ಮಾರ್ಗದರ್ಶನದಲ್ಲಿ ದಿನಾಂಕ 10-07- 2023 ರಂದು ಸಂಶಯುತ ಅರೋಪಿ ವಿಶಾಲ ನರಸಿಂಗ ಶೇರಖಾನೆ ಸಾಃ ಕೊಲ್ಲಾಪೂರ ಇತನಿಗೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿತನು ಹೊಸೂರ ಗ್ರಾಮದಲ್ಲಿ ದಿನಾಂಕ 29-05- 2023 ರಂದು ಮನೆಕಳ್ಳತನ ಮಾಡಿ 25 ಗ್ರಾಂ ತೂಕದ ಬೆಳ್ಳಿಯ 2 ಆಭರಣಗಳನ್ನು ಮತ್ತು 290 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಮತ್ತು ರೋಖ ಹಣವನ್ನು ಕಳ್ಳತನ ಮಾಡಿದ್ದಾಗಿ ಮತ್ತು ಉಳ್ಳಾಗಡ್ಡಿ ಖಾನಾಪೂರ ಗ್ರಾಮದಲ್ಲಿ 2 ಮನೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಂತೆ ಆರೋಪಿತನಿಗೆ ಮಾನ್ಯ ನ್ಯಾಯಾಲಯದಿಂದಾ ಪೊಲೀಸ ವಶಕ್ಕೆ ಪಡೆದು ಅವನಿಂದಾ ಕಳ್ಳತನಕ್ಕೆ ಉಪಯೋಗಿಸಿದ ಕಾರಗಾಡಿ ನಂಬರ ಎಮ್.ಹೆಚ್-09-ಎಬಿ-5845 ಇದನ್ನು ಮತ್ತು ಸಲಕರಣಿಗಳನ್ನು ಮತ್ತು 122.5 ಗ್ರಾಂ ತೂಕದ 658,800 ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಮತ್ತು 640 ಗ್ರಾಂ ತೂಕದ 44800/- ರೂ ಕಿಮ್ಮತ್ತಿನ ಬೆಳ್ಳಿಯ ಆಭರಣಗನ್ನು ವಶಪಡಿಸಿಕೊಂಡಿದ್ದು .

ಈ ಸಿಬ್ಬಂದಿಯ ಕಾರ್ಯವನ್ನು ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಸಂಜೀವ ಪಾಟೀಲರು ಸಿಬ್ಬಂದಿಗಳ ಕರ್ತವ್ಯಕ್ಕೆ ಶ್ಲಾಘಿಸಿದ್ದಾರೆ.