Belagavi News In Kannada | News Belgaum

ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅನುಮತಿ ಕೊಟ್ಟರೆ ರಾಜ್ಯವೇ ಹೊತ್ತಿ ಉರಿಯುತ್ತೆ: ಮುತಾಲಿಕ್‌ ಎಚ್ಚರಿಕೆ..

ಧಾರವಾಡ: ಕಾಂಗ್ರೆಸ್‌ ಸರ್ಕಾರ ವಿಧಾನಸೌಧದಲ್ಲಿ ನಮಾಜ್‌ ಮಾಡಲು ಅನುಮತಿ ಕೊಟ್ರೆ, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡ್ತೀವಿ, ಕರ್ನಾಟಕವೇ ಹೊತ್ತಿ ಉರಿಯುತ್ತೆ. ನಾವೂ ವಿಧಾನಸೌಧದಲ್ಲಿ ಪ್ರತಿದಿನ ಹನುಮಾನ್‌ ಚಾಲಿಸಾ ಪಠಣ ಮಾಡ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ..

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ (ಅoಟಿgಡಿess) ಅನ್ನೋದು ಸಂಪೂರ್ಣ ಹಿಂದೂ ವಿರೋಧಿ ಸರ್ಕಾರ. ಕುರುಬರಹಳ್ಳಿಯ ಗೋ ಶಾಲೆ ಮಾಡಲು ಜಾಗ ನೀಡಲಾಗಿತ್ತು, ಕಾಂಗ್ರೆಸ್‌ ಸರ್ಕಾರ ಅದನ್ನೂ ತಡೆ ಹಿಡಿದಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದ್ದಾರೆ..

ಗೋ ರಕ್ಷಣೆಗಾಗಿ ಬಿಜೆಪಿ ಸರ್ಕಾರದಿಂದ ಜಮೀನು ಪಡೆದಿದ್ದು, ಯಾವುದೇ ಲಾಭಕ್ಕಾಗಿ ಅಲ್ಲ. ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಅದನ್ನ ಪಡೆದಿಲ್ಲ. ಈಗಿನ ಸರ್ಕಾರದಲ್ಲಿ ಪೂಜೆ ಮಾಡಲು ಸಹ ಅನುಮತಿ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. .

ಟಿ. ನರಸೀಪುರದಲ್ಲಿ ದಲಿತ ಹಿಂದೂ ಯುವಕ ಬೆಳೆಯುತ್ತಾನೆ ಎಂಬ ಕಾರಣಕ್ಕೆ ಅವನನ್ನ ಹತ್ಯೆ ಮಾಡಲಾಗಿದೆ. ಹಿಂದೂ ವಿರೋಧಿ ಅನ್ನೂದು ಕಾಂಗ್ರೆಸ್‌ನ ರಕ್ತದ ಕಣಕಣದಲ್ಲೂ ಇದೆ ಎಂದು ಕಿಡಿ ಕಾರಿದ್ದಾರೆ..

ವಿಧಾನಸೌಧದಲ್ಲಿ ನಮಾಜ್‌ಗೆ ಅವಕಾಶ ನೀಡುವಂತೆ ಕೋರಿಕ್ಕೆ ಪ್ರತಿಕ್ರಿಯಿಸಿ, ಇಲ್ಲಿಯವರೆಗೂ ಹೇಗೆಲ್ಲಾ ದೇಶವನ್ನ ನುಂಗಿ ಹಾಕಿದ್ದಾರೆ ಅನ್ನೋದು ಗೊತ್ತಿದೆ. ವಿಧಾನಸೌಧ ಮಕ್ಕಾ ಮದೀನಾದಲ್ಲಿರುವ ಮಸೀದಿ ಅಲ್ಲ. ಅಲ್ಲಿ ಒಬ್ಬೊಬ್ಬರೋ ಒಂದೊಂದು ಕೇಳ್ತಾರೆ..

ಸರ್ಕಾರ ಏನಾದರೂ ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅವಕಾಶ ಕಲ್ಪಿಸಿಕೊಟ್ಟರೆ, ಪ್ರತಿದಿನ ನಾ ವು ಹನುಮಾನ್‌ ಚಾಲಿಸಾ ಪಠಣ ಮಾಡ್ತೇವೆ. ಜೊತೆಗೆ ದೊಡ್ಡ ಪ್ರಮಾಣದ ಹೋರಾಟ ಮಾಡ್ತೀವಿ, ಇಡೀ ಕರ್ನಾಟವೇ ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.