Belagavi News In Kannada | News Belgaum

ಹಿಂದುಳಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಕ್ಷಯರೋಗ ಪತ್ತೆ ಅಭಿಯಾನ

ಬೆಳಗಾವಿ, ಜು.15  : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಭಾರತವನ್ನು ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಕ್ಷಯ ಮುಕ್ತ ಸಮಾಜಕ್ಕಾಗಿ ಆಂದೋಲನವನ್ನು ಹಮ್ಮಿಕೊಂಡಿದ್ದು ಕರ್ನಾಟಕ ರಾಜ್ಯಾದ್ಯಂತ ಜು. 17 2023 ರಿಂದ ಅ.2 2023 ವರೆಗೆ ಜಿಲ್ಲೆಯಾದ್ಯಂತ ಆಯ್ದ ಸೂಕ್ಷ್ಮ ಪ್ರದೇಶದಲ್ಲಿನ ಮನೆ ಮನೆ ಬೇಟಿ ನೀಡಿ ಕ್ಷಯರೋಗ ಪತ್ತೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ತಿಳಿಸಿದರು.

ಹಿಂದುಳಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ರವರ ಅಧ್ಯಕ್ಷತೆಯಲ್ಲಿ ಶುಕ್ರವಾರ (ಜು.14) ರಂದು ಬೆಳಗಾವಿ ವ್ಯಾಕ್ಸಿನ್ ಡಿಪೋ ಕಚೇರಿಯಲ್ಲಿ ಜಿಲ್ಲಾ ಸಕ್ರೀಯ ಕ್ಷಯರೋಗ ಪತ್ತೇ ಆಂದೋಲನ ಕಾರ್ಯಕ್ರಮಕ್ಕೆ ಸಂಬಂದಿಸಿದ ಬಿತ್ತಿ ಪತ್ರಗಳನ್ನು ಕರಪತ್ರಗಳನ್ನು ಬಿಡುಗಡೆ ಮಾಡಿದರು.

ಬೆಳಗಾವಿ ಜಿಲ್ಲೆಯ ಎಲ್ಲ ನಗರ & ಗ್ರಾಮೀಣ ಪ್ರದೇಶ ಒಟ್ಟಾರೆ 56.28 ಲಕ್ಷ ಜನಸಂಖ್ಯೆಯ ಮನೆ ಮನೆ ಬೇಟಿ ನೀಡಿ ಕ್ಷಯರೋಗ ತಪಾಸಣೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ತಿಳಿಸಿದರು.

ಈ ಆಂದೋಲನದಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಶತ 20% ರಷ್ಟು ಅಂದರೆ 11.40 ಲಕ್ಷ ಜನಸಂಖ್ಯೆ ಗುರುತಿಸಿ ಮನೆ ಮನೆ ಬೇಟಿ ನೀಡಿ ಕ್ಷಯರೋಗ ತಪಾಸಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ, ಇದಕ್ಕಾಗಿ ಜಿಲ್ಲೆಯಾದ್ಯಾಂತ 3024 ನುರಿತ ಆರೋಗ್ಯ ಸಹಾಯಕರು ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರನ್ನೊಳಗೊಂಡ ತಂಡಗಳನ್ನು ರಚಿಸಿ ಪ್ರತಿ ತಂಡವು ಈ ಅವಧಿಯಲ್ಲಿ ಪ್ರತಿದಿನ 40 ರಿಂದ 50 ಮನೆಗಳನ್ನು ಬೇಟಿಮಾಡಿ ಕುಟುಂಬದ ಎಲ್ಲ ಸದಸ್ಯರಿಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಿ ಕ್ಷಯರೋಗದ ಲಕ್ಷಣಗಳುಳ್ಳ ಕುಟುಂಬದ ಸದಸ್ಯರ ಕಫವನ್ನು ಸ್ಥಳದಲ್ಲಿಯೇ ಸಂಗ್ರಹಿಸಿ ತಪಾಸಣೆಗೆ ನಿಯೋಜಿತ ಕಫ ತಪಾಸಣಾ ಕೇಂದ್ರಕ್ಕೆ ಕಳುಹಿಸಿ, ತಪಾಸಣೆ ಮಾಡಿ ಕ್ಷಯ ರೋಗವಿದ್ದದು ಕಂಡು ಬಂದಲ್ಲಿ ಸ್ಥಳದಲ್ಲಿಯೇ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಕ್ಷಯರೋಗ ನಿಯಂತ್ರಣಾಧಿಕಾರಿಗಳು ಡಾ.ಅನಿಲ ಕೊರಬು ಅವರು ತಿಳಿಸಿದರು.

ಅದಲ್ಲದೇ ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಕ್ಷ-ಕಿರಣ ತಪಾಸಣೆ ವ್ಯವಸ್ಥೆ ಮಾಡಿ ಸಂಶಯಾಸ್ಪದ ರೋಗಿಗಳ ಕ್ಷ ಕಿರಣ ತಪಾಸಣೆ ಮಾಡಲಾಗುವುದು ಹಾಗೂ ಕ್ಷ ಕಿರಣ ಪರಿಕ್ಷೇಯಲ್ಲಿ ವಿಪರೀತ ಫÀಲಿತಾಂಶ ಬಂದ ಸಂಶಯಾಸ್ಪದ ಕ್ಷಯರೋಗಿಗಳಿಗೆ ಸಿಬಿನ್ಯಾಟ್ ಟ್ರೂನ್ಯಾಟ್ (ತ್ವರಿತ ಕ್ಷಯರೋಗ ತಪಾಸಣಾ ಯಂತ್ರ) ಸೌಲಭ್ಯವನ್ನು ಜಿಲ್ಲೆಯ ಅಥಣಿ, ಗೋಕಾಕ, ಚಿಕ್ಕೋಡಿ, ಸವದತ್ತಿ ಬೆಳಗಾವಿ, ರಾಯಬಾಗ, ಬೈಲಹೊಂಗಲ ಹಾಗೂ ನಿಪ್ಪಾಣಿ ಆರೋಗ್ಯ ಕೇಂದ್ರಗಳಲ್ಲಿ ಕಲ್ಪಿಸಲಾಗುವುದು. ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಶ ಕೋಣಿ ಅವರು ತಿಳಿಸಿದರು..