Belagavi News In Kannada | News Belgaum

ಪತಿ ಭೀಕರ ಹತ್ಯೆ: ಕೊಲೆ ಹಿಂದೆ ಪತ್ನಿಯ ಪ್ರಿಯಕರನ ಕೈವಾಡ ಶಂಕೆ

ಬೆಳಗಾವಿ:  ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ  ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ  ಇಂದು ನಡೆದಿದ್ದು, ಪತ್ನಿಯ ಪ್ರೀಯಕರ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ

ಶಂಕರ್ ಸಿದ್ದಪ್ಪ ಜಗಮಟ್ಟಿ(27) ಮೃತ ವ್ಯಕ್ತಿ.   2023 ರಲ್ಲಿ  ಮದುವೆಯಾಗಿದ್ದ ಶಂಕರ ಅಮವಾಸ್ಯೆ ನಿಮಿತ್ತ ದಂಪತಿ ಸಮೇತ ಬನಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದರು.  ದೇವಸ್ಥಾನದ ಆವರಣದಲ್ಲಿಯೇ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ./////