ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ : ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರಥಮ ವರ್ಷದ ಪ್ರವೇಶ ಪ್ರಾರಂಭ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ : ಅರ್ಜಿ ಆಹ್ವಾನ
ಬೆಳಗಾವಿ, ಜು.17: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2022 23 ನೇ ಸಾಲಿನಲ್ಲಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿಯಲ್ಲಿ 20+1 ಕುರಿ ಮೇಕೆ ಘಟಕ ಅನುಷ್ಟಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಗೆ ಒಟ್ಟು 2113 ಗುರಿಗಳನ್ನು ನಿಗದಿಪಡಿಸಲಾಗಿದ್ದು, ನಿಗಮದ ಮಾರ್ಗಸೂಚಿ ಪ್ರಕಾರ ಜಿಲ್ಲೆಯ ನಿಗಮದಲ್ಲಿ ನೊಂದಾಯಿತ ಹಾಗೂ ಕರ್ನಾಟಕ ಸಹಕಾರ ಕುರಿ & ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದಲ್ಲಿ ಸದಸ್ಯತ್ವವನ್ನು ಹೊಂದಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಫಲನುಭವಿಗಳ ಆಯ್ಕೆಯನ್ನು ಸದಸ್ಯತ್ವವನ್ನು ಹೊಂದಿರುವ ಸಂಘಗದವರು ಆಯ್ಕೆ ಮಾಡಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬಹುದಾಗಿದೆ.
ಅರ್ಜಿದಾರ ಫಲಾನುಭವಿಗಳ ಪಟ್ಟಿಯನ್ನು ಸಂಘದ ಮೂಲಕ ಸಲ್ಲಿಸಲು ಜು.21 2023 ರಂದು ಅಂತಿಮ ದಿನಾಂಕ ವಾಗಿರುತ್ತದೆ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸದಸ್ಯತ್ವವನ್ನು ಹೊಂದಿರುವ 18 ರಿಂದ 60 ವಯೋಮಿತಿಯಲ್ಲಿರುವ ಎಸ್.ಸಿ ಎಸ್.ಟಿ ಹಾಗೂ ಸಾಮಾನ್ಯ ವರ್ಗದ ಸದಸ್ಯರುಗಳು ಅರ್ಜಿ ಸಲ್ಲಿಸಬಹುದಾಗಿದೆ..
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 0831-2431294 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಯಮಿತ ನಿಗಮದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರಥಮ ವರ್ಷದ ಪ್ರವೇಶ ಪ್ರಾರಂಭ
ಬೆಳಗಾವಿ, ಜು.17 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಪ್ರವೇಶ ಪ್ರಾರಂಭವಾಗಿದ್ದು, ವಿಶ್ವವಿದ್ಯಾನಿಲಯವು 2023-24 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತಿಯ ಪ್ರಥಮ ವರ್ಷಕ್ಕೆ ವಿವಿಧ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸ್ನಾತಕ ಶಿಕ್ಷಣ ಕಾರ್ಯಕ್ರಮದಡಿ ಬಿ.ಎ, ಬಿ.ಕಾಂ, ಬಿಬಿಎ, ಬಿ.ಎಸ್.ಡಬ್ಲು ಬಿಎಡ್, ಬಿ.ಎಸ್.ಸಿ, ಬಿಎಸ್‍ಸಿ ಹೋಮ್ ಸೈನ್ಸ, ಬಿಎಸ್ಸಿ ಇನ್‍ಫಾರ್‍ಮೇಷನ್ ಟೆಕ್ನಾಲಜಿ, ಬಿಸಿಎ ಹಾಗೂ, ಸ್ನಾತಕೊತ್ತರ ಪದವಿಗಳಾದ ಎಮ್‍ಎ, ಎಮ್‍ಕಾಂ, ಎಮ್ ಎಸ್ ಡಬ್ಲು, ಎಂಬಿಎ, ಹಾಗೂ ಪಿ.ಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು, ಡಿಪ್ಲೋಮ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿವೆ.
ಬಿ.ಪಿ.ಎಲ್ ಕಾರ್ಡ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಡಿಫೇನ್ಸ, ಮಾಜಿ ಸೈನಿಕರಿಗೆ ಬೋಧನಾ ಶುಲ್ಕದಲ್ಲಿ ಶೇ.15, ಆಟೋ, ಕ್ಯಾಬ್ ಚಾಲಕರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.30 ರಷ್ಟು ವಿನಾಯಿತಿಯಿದೆ. ಕೋವಿಡ್ 19 ನಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ ತೃತಿಯ ಲಿಂಗಿಗಳು ಹಾಗೂ ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಬೋದನಾ ಶುಲ್ಕ ಉಚಿತವಾಗಿರುತ್ತದೆ.
ಅ.31 2023 ರ ವರೆಗೆ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ,ಕ ರಾ ಮು ವಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರು ಹಾಗೂ ಬೆಳಗಾವಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ ಆವರಣ, ನೆಹರು ನಗರದಲ್ಲಿರುವ ಕಚೇರಿಯ ಮೊ. ಸಂಖ್ಯೆ 7892597159 ,0831-2002815ಗೆ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕರು , ಡಾ.ಎಚ್.ಮಲ್ಲಿಕಾರ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///