ಸಾವನ್ನೂ ಲೆಕ್ಕಿಸದೆ ಮೈದುಂಬಿ ಹರಿಯುತ್ತಿರುವ ಗೋಕಾಕ ಪಾಲ್ಸ್ನಲ್ಲಿ ಪ್ರವಾಸಿಗರ ಹುಚ್ಚಾಟ: ಪೊಲೀಸ್ ರ ಹದ್ದಿನ ಕಣ್ಣು

ಗೋಕಾಕ: 15 ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕುಂಭ ದ್ರೋಣ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿಯೂ ನಿರಂತರ ಮಳೆಯಾಗುತ್ತಿದೆ. ಬೆಳಗಾವಿ ಸುತ್ತಮುತ್ತ ಹಲವು ಜಲಪಾತಗಳಿದ್ದು ಎಲ್ಲಾ ಜಲಪಾತಗಳು ಮೈದುಂಬಿ ಧುಮ್ಮುಕ್ಕುತ್ತಿದ್ದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆಯುತ್ತಿವೆ. ಆದರೆ, ಪ್ರವಾಸಿಗರು ದೂರಿನಿಂದ ಪ್ರಕೃತಿ ಸೌಂದರ್ಯ ಸವಿದನ್ನು ಬಿಟ್ಟು, ಸಾವನ್ನೂ ಲೇಕ್ಕಿಸದೇ ಜಲಪಾತನಿಂದ ಮುಂಭಾಗದಲ್ಲಿ ಪೋಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿವುದಕ್ಕೆ ಎದೇ ನಡುಕ ಹುಟ್ಟಿಸುತ್ತದೆ.
ಪೊಲೀಸ್ ರಿಗೆ ತಲೆನೋವು:
ಹೀಗಾಗಿ ಗೋಕಾಕ್ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದೆ. ಮೈದುಂಬಿ ಧುಮ್ಮುಕ್ಕುವ ಗೋಕಾಕ ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಬರುತ್ತಿರುವ ಪ್ರವಾಸಿಗರ ಹುಚ್ಚಾಟವ ತಲೆನೋವಾಗಿದ್ದು, ಪೊಲೀಸ್ ರನ್ನು ನಿಯೋಜನೆ ಮಾಡಲಾಗಿದೆ.
ಗೋಕಾಕ ಜಲಪಾತದಲ್ಲಿ ಕಲ್ಲು ಹಾಸಿಗೆ ಮೇಲಿಂದ 171 ಅಡಿ ಆಳಕ್ಕೆ ನೀರು ಧುಮ್ಮುಕ್ಕುತ್ತದೆ. ಇಲ್ಲಿ ಭೇಟಿ ನೀಡಿದ ಕೆಲ ಪ್ರವಾಸಿಗರು ಬಂಡೆಯ ಮೇಲೇರಿ ಜಲಪಾತದ ತುತ್ತತುದಿಗೆ ಹೋಗುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಫೋಟೋಗೆ ಪೋಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇಂದು ಭಾನುವಾರ ಹಿನ್ನೆಲೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿತ್ತು. ಈ ಹಿಂದೆ ಗೋಕಾಕ ಜಲಪಾತ ತುದಿಗೆ ಹೋಗಿ ಕಾಲು ಜಾರಿ ಬಿದ್ದು ಕೆಲ ಪ್ರವಾಸಿಗರು ಮೃತಪಟ್ಟ ಪ್ರಕರಣಗಳು ನಡೆದಿದ್ದವು.
ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಗೋಕಾಕ್ ಗ್ರಾಮೀಣ ಪೊಲೀಸರನ್ನು ಜಲಪಾತ ಬಳಿ ನಿಯೋಜಿಸಿದ್ದಾರೆ. ಜಲಪಾತ ಬಳಿ ಪ್ರವಾಸಿಗರು ತೆರಳದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ಕ್ರೈಮ್ ಸೀನ್ ಟೇಪ್ ಕಟ್ಟಿದ್ದಾರೆ. ದೂರದಿಂದಲೇ ಜಲಪಾತ ವೀಕ್ಷಿಸುವಂತೆ ಪ್ರವಾಸಿಗರಲ್ಲಿ ಪೊಲೀಸರು/////