Belagavi News In Kannada | News Belgaum

ಅಮಾನತುಗೊಂಡ ಬಿಜೆಪಿ ಶಾಸಕರನ್ನ ಎತ್ತಾಕೊಂಡು ಬಂದ ಮಾರ್ಷಲ್‌ಗಳು

ಬೆಂಗಳೂರು: ವಿಧಾನಸಭೆಯಲ್ಲಿ ಸ್ಪೀಕರ್‌ ಯು.ಟಿ ಖಾದರ್ ಅವರು ಬಿಜೆಪಿ ಶಾಸಕರನ್ನು ಅಮಾನತುಗೊಳಿಸುತ್ತಿದ್ದಂತೆ ಮಾರ್ಷಲ್‌ಗಳು ಶಾಸಕರನ್ನ ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ಬಿಜೆಪಿ ಸದಸ್ಯರಾದ ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ, ವೇದವ್ಯಾಸ್ ಕಾಮತ್‌ ಅವರನ್ನ ಮಾರ್ಷಲ್‌ಗಳು ಹೊರ ಹಾಕಿದ್ದಾರೆ. ಅಮಾನತುಗೊಂಡ ಬಿಜೆಪಿಯ ಒಬ್ಬೊಬ್ಬರು ಸದಸ್ಯರನ್ನೇ ಮಾರ್ಷಲ್‌ಗಳು ಹೊರ ಹಾಕಿದರು.

ವಿಧಾನಸಭೆಯಲ್ಲಿ ಸ್ಪೀಕರ್‌ ಯು.ಟಿ ಖಾದರ್ ಅವರು ಅಮಾನತುಗೊಳಿಸುತ್ತಿದ್ದಂತೆ ಮಾರ್ಷಲ್‌ಗಳು ಬಿಜೆಪಿ ಶಾಸಕರನ್ನ ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ, ವೇದವ್ಯಾಸ್ ಕಾಮತ್‌ ಅವರನ್ನ ಮಾರ್ಷಲ್‌ಗಳು ಎತ್ತಾಕೊಂಡು ಬಂದು ಹೊರ ಹಾಕಿದ್ದಾರೆ.

ಪ್ರವೇಶ ದ್ವಾರದ ಗಾಜು ಪುಡಿ ಪುಡಿ: ಬಿಜೆಪಿಯ 10 ಶಾಸಕರ ಅಮಾನತು ವಿರೋಧಿಸಿ ಪ್ರತಿಭಟನೆ ಮಾಡಲಾಗುತ್ತಿದ್ದು, ಈ ವೇಳೆ ವಿಧಾನಸಭೆ ಪೂರ್ವಭಾಗದ ಪ್ರವೇಶ ದ್ವಾರದ ಗಾಜು ಪುಡಿ ಪುಡಿ ಆಗಿದೆ.//////