ಮುಕ್ತ ಮಾರುಕಟ್ಟೆಯಲ್ಲಿ ಗೋಧಿ, ತೋಗರಿ ಬೆಳೆ ಮತ್ತು ಉದ್ದಿನ ಬೆಳೆ ದರವನ್ನು ನಿಯಂತ್ರಿಸಲು ದಾಸ್ತಾನು ಮಿತಿ
\

ಬೆಳಗಾವಿ,: ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ, ತೋಗರಿ ಬೆಳೆ ಹಾಗೂ ಉದ್ದಿನ ಬೆಳೆ ದರವನ್ನು ಅಗತ್ಯ ವಸ್ತುಗಳ ಕಾಯ್ದೆ 1955 ರ ಹಾಗೂ ಕರ್ನಾಟಕ ಸರ್ಕಾರದ ತಿದ್ದುಪಡಿ ಅಗತ್ಯ ವಸ್ತುಗಳ ಲಾಯನ್ಸ್‍ಸಿಂಗ್ ಆದೇಶ 1986 ರಡಿ ಗೋಧಿಗೆ ಸಂಬಂಧಿಸಿದಂತೆ, ಸಗಟು ವ್ಯಾಪಾರಸ್ಥರಿಗೆ 3000 ಮೆ.ಟನ್ ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ 10 ಮೆ.ಟನ್ ಹಾಗೂ ತೋಗರಿ ಮತ್ತು ಉದ್ದಿನ ಬೆಳೆಗೆ ಸಂಬಂಧಿಸಿದಂತೆ ಸಗಟು ವ್ಯಾಪಾರಸ್ಥರಿಗೆ 200 ಮೆ.ಟನ್ ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ 5 ಮೆ.ಟನ್ ಈ ರೀತಿ ಮೇಲೆ ನಮೂದಿಸಿದ ಆದೇಶದಲ್ಲಿ ದಾಸ್ತಾನು ಮಿತಿಯನ್ನು ವಿಧಿಸಲಾಗಿದ್ದು ಜಿಲ್ಲೆಯಲ್ಲಿರುವ ಎಲ್ಲ ಸಗಟು, ಕಿರುಕುಳ ಹಾಗೂ ಗೋಧಿ ಪ್ಲೋರ್ ಮೀಲ್ ವ್ಯಾಪಾರಸ್ಥರು ಸದರಿ ದಾಸ್ತಾನು ಮಿತಿಗೆ ಒಳಪಟ್ಟು ದಾಸ್ತಾನನ್ನು ನಿರ್ವಹಿಸತಕ್ಕದ್ದು, ಇದನ್ನು ಹೊರತು ಪಡಿಸಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಮತ್ತು ಹೆಚ್ಚಿನ ದಾಸ್ತಾನು ನಿರ್ವಹಿಸಿದ್ದಲ್ಲಿ ನಿಯಮಾನುಸಾರದ ಮೇಲೆ ನಮೂದಿಸಿದ ಕಲಂ ರಡಿ ಕಾನೂನು ರೀತ್ಯ ಕ್ರಮವನ್ನು ವಹಿಸಲಾಗುವುದು.
ಸದರಿ ದಾಸ್ತಾನು ಮಿತಿಯನ್ನು ಗೋಧಿಗೆ ಸಂಬಂಧಿಸಿದಂತೆ ಮಾ.31 2024 ರವರೆಗೆ ಹಾಗೂ ತೋಗರಿ ಮತ್ತು ಉದ್ದಿನ ಬೆಳೆಗೆ ಸಂಬಂಧಿಸಿದಂತೆ ಅಕ್ಟೋಬರ 31 2023 ರವರೆಗೆ ಜಾರಿಯಲ್ಲಿ ಇರುತ್ತದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.