Belagavi News In Kannada | News Belgaum

ಶುದ್ದ ಕುಡಿಯುವ ನೀರಿನ ಘಟಕಗಳ ಕಾರ್ಯಚರಣೆ : ಪ್ರಕಟಣೆ

ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ : “ಮಿನಿ ಉದ್ಯೋಗ ಮೇಳ”

ಬೆಳಗಾವಿ, ಜು.20: ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವತಿಯಿಂದ ಜು. 24 2023 ರ ಮುಂಜಾನೆ 9 ಗಂಟೆಯಿಂದ ಮದ್ಯಾಹ್ನ 1.30 ಗಂಟೆಯವರೆಗೆ, ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ (ಮೆಕ್ಯಾನಿಕಲ್ ಇಂಜಿನಿಯರ್) ಹಾಗೂ ಯಾವದೇ ಪದವಿ ಮತ್ತು ಯಾವುದೇ ಸ್ನಾತಕೋತ್ತರ ಪದವಿ …ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ “ಮಿನಿ ಉದ್ಯೋಗ ಮೇಳ” ವನ್ನು (Mini Job Fair) ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ರಾಜಾ ಲಖಮಗೌಡಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗುತ್ತದೆ.
ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ವೆಬ್‍ಸೈಟ್  https://forms.gle/mNrTHohcjSrfTRuN6     ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಮಿನಿ ಉದ್ಯೋಗಮೇಳದಲ್ಲಿ ಪ್ರತಿಷ್ಠಿತ 7ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8147685479/9880149513 ಗೆ ಸಂಪರ್ಕಿಸಬಹುದು ಎಂದು, ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.///

Top Class ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಅಹ್ವಾನ

ಬೆಳಗಾವಿ, ಜು.20 : ಕೇಂದ್ರ ಪುರಸ್ಕೃತ ಖಿoಠಿ ಅಟಚಿss ವಿದ್ಯಾರ್ಥಿವೇತನವನ್ನು ಪಡೆಯಲು ರಾಜ್ಯದ ಖಿoಠಿ Sಛಿhooಟs ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮುಖಾಂತರ ಸೆಪ್ಟೆಂಬರ್ 29 2023 ರಂದು ಪರೀಕ್ಷೆ ನಡೆಸಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಯೋಜನೆಗೆ ಅರ್ಹ ಇರುವ ವಿದ್ಯಾರ್ಥಿಗಳು ಜುಲೈ.11 2023 ರಿಂದ ಆಗಸ್ಟ್.10 2023 ರ ಒಳಗಾಗಿ ವೆಬ್‍ಸೈಟ್ https://yet.nta.ac.in  ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೆಳಗಾವಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುಣಾವಣಾ ಅಧಿಕಾರಿಗಳು ಮನೆ ಮನೆಗೆ ಭೇಟಿ

 

ಬೆಳಗಾವಿ, ಜು.20: ಬೆಳಗಾವಿ ಉತ್ತರ 11 ಹಾಗೂ ಬೆಳಗಾವಿ ದಕ್ಷಿಣ 12, ವಿಧಾನಸಭಾ ಮತಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024 ರ ನಿಮಿತ್ಯ ಮತದಾರರ ನೋಂದಣಿ ಜು. 21 2023 ರಿಂದ ಆ. 21 2023 ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯಲಿದೆ,
ಹೊಸದಾಗಿ ಮತದಾರರ ನೋಂದಣಿ, ಮರಣ ಹೊಂದಿದಲ್ಲಿ ಮತ್ತು ಸ್ಥಳಾಂತರ, ತಿದ್ದಪಡಿ, ವರ್ಗಾವಣೆ ಮಾಡಲು ಆಗಸ್ಟ್. 21 2023 ರ ವರಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಅವಶ್ಯಕ ದಾಖಲೆಗಳ ಧರಡಿಕರಣಗಳೋದಿಗೆ ಸಲ್ಲಿಸಬಹುದಾಗಿದೆ,
ಸದರಿ ವಿಧಾನಸಭಾ ಮತಕ್ಷೇತ್ರಗಳಲ್ಲಿನ ಸಾರ್ವಜನಿಕರು ಸರ್ವೆ ಕಾರ್ಯದ ಸದುಪಯೋಗ ಪಡೆದಕೊಳ್ಳಬಹುದು ಎಂದು ಬೆಳಗಾವಿ ಉತ್ತರ 11 ಹಾಗೂ 12 ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರ ಹಾಗೂ ಮತದಾರರ ನೋಂದಣಾಧಿಕಾರಿಗಳು, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ////

 

ಶುದ್ದ ಕುಡಿಯುವ ನೀರಿನ ಘಟಕಗಳ ಕಾರ್ಯಚರಣೆ

20-07-2023
ಬೆಳಗಾವಿ, ಜು.20 : ಖಾನಾಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮತ್ತು ಕಾರ್ಯಚರಣೆ ಇನ್ನು ಮುಂದೆ ಗ್ರಾಮ ಪಂಚಾಯತಿಯಿಂದ ಮಾಡಬೇಕಾಗುತ್ತದೆ ಎಂದು ಖಾನಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ವೀರಣ್ಣಗೌಡ ಅವರು ತಿಳಿಸಿದರು.
ಜು. 19 2023 ರಂದು ಜಿಲ್ಲಾ ಪಂಚಾಯತಿ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಬೆಳಗಾವಿ.ತಾಲೂಕು ಪಂಚಾಯತಿ ಖಾನಾಪುರ ಇವರ ಆಶ್ರಯಲ್ಲಿ ಖಾನಾಪುರ ತಾಲೂಕು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ವಾಟರ್ ಮನ್ ,ಪಂಪ್ ಆಪರೇಟರಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮತ್ತು ಕಾರ್ಯಚರಣೆ ಕುರಿತು ಹಮ್ಮಿಕೊಂಡ ಕಾರ್ಯಗಾರ ಉದೇಶಿಸಿ ಮಾತನಾಡಿದರು.
ಖಾನಾಪುರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪವಿಭಾಗ ಪ್ರವೀಣ ಮಠಪತಿ ಜಲಜೀವನ್ ಮಿಷನ್ ಯೋಜನೆ, ಶುದ್ದ ಕುಡಿಯು ನೀರಿನ ಘಟಕಗಳ ಬಗ್ಗೆ ತರಬೇತಿ ನೀಡಿ ಯೋಜನೆ ಅನುಷ್ಠಾನ ಮಾಡುವ ಕುರಿತು ಈಖಿಏ ಕಿಟ್ ಮೂಲಕ ಗ್ರಾಮ ಪಂಚಾಯತಿ ಹಂತದಲ್ಲಿ ನೀರು ಪರೀಕ್ಷೆ ಮಹತ್ವದ ಕುರಿತು ಖಾನಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ವೀರಣ್ಣಗೌಡ ಮಾಹಿತಿ ನೀಡಿದರು.
.
ಜಿಲ್ಲಾ ಯೋಜನಾ ವ್ಯವಸ್ಥಾಪಕರು ನೀಲಮ್ಮ ಕಮತೆ ಜಲಜೀವನ್ ಮಿಷನ್ ಆರೋಗ್ಯ ಇಲಾಖೆಯ ಅಧಿಕಾರಗಳು, ಸಹಾಯಕ ಅಬಿಯಂತರರು, ಖಾನಾಪುರ, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ವಾಟರ್‍ಮನ್‍ಗಳು, ಖಾನಾಪುರ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪವಿಭಾಗ ಸಿಬ್ಬಂದಿಗಳು ಉಪಸ್ಥಿತರಿದ್ದರು./////

ಅನ್ನಭಾಗ್ಯ ಯೋಜನೆ: ಅರ್ಹ ಫಲಾನುಭವಿಗಳಿಗೆ ಅಕ್ಕಿ ಜೊತೆ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಸೌಲಭ

ಬೆಳಗಾವಿ, ಜು.20 : ಸರ್ಕಾರವು ಜುಲೈ-2023 ಮಾಹೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಜೊತೆಗೆ ರಾಜ್ಯ ಸರ್ಕಾರ ಘೊಷಣೆ ಮಾಡಿದ ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ ಹತು ್ತಕೆ.ಜಿ ಅಕ್ಕಿ ನೀಡುವ ಪ್ರಮುಖ ಯೋಜನೆಯಾಗಿದ್ದು ಅದರಲ್ಲಿ ಈಗಾಗಲೇ 05 ಕೆ.ಜಿ ಅಕ್ಕಿಯನ್ನುಉಚಿತವಾಗಿ ನೀಡಲಾಗುತ್ತಿದ್ದು ಇನ್ನುಳಿದ 05 ಕೆ.ಜಿ ಅಕ್ಕಿಯ ಬದಲಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯನ್ನು ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಜಿಲ್ಲೆಯ 68,637 ಅಂತ್ಯೋದಯ ಅನ್ನಯೋಜನೆ, 10,80,880 ಪಿ.ಎಚ್.ಎಚ್ ಪಡಿತರ ಚೀಟಿಗಳಿದ್ದು ಅಂದಾಜು 37,72,315 ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಅಂತ್ಯೋದಯ ಪಡಿತರ ಚೀಟಿಯ ಫಲಾನುಭವಿಗಳಿಗೆ 35 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದ್ದು ಹೀಗಾಗಿ ಸದರಿ ಕಾರ್ಡಿನಲ್ಲಿ 03 ಸದಸ್ಯರು ಇರುವ ಫಲಾನುಭವಿಗಳಿಗೆ ಡಿ.ಬಿ.ಟಿ ಸೌಲಭ್ಯ ಇರುವದಿಲ್ಲ, 04 ಸದಸ್ಯರಿದ್ದರೆ ರೂ.170/-, 05 ಸದಸ್ಯರಿದ್ದರೆ ರೂ.510/-, 06 ಸದಸ್ಯರಿದ್ದರೆ ರೂ.850/-, 07 ಸದಸ್ಯರಿದ್ದಲ್ಲಿ ರೂ.1190/-ಹೀಗೆ ಸದಸ್ಯರ ಸಂಖ್ಯೆ ಆದರಿಸಿ ಲೆಕ್ಕಾಚಾರ ಮಾಡಿ ಫಲಾನುಬವಿಗಳ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮಾಡಲಾಗುವುದು.
ಅದರಂತೆ ಪಿ.ಎಚ್.ಎಚ್.(ಬಿ.ಪಿ.ಎಲ್) ಅಡಿತರಚೀಟಿಯ ಪ್ರತಿ ಸದಸ್ಯರಿಗೆ 05 ಕೆ,ಜಿ ಅಕ್ಕಿಯನ್ನು ಈಗಾಗಲೇ ಉಚಿತವಾಗಿ ನೀಡಲಾಗುತ್ತಿದ್ದು ಅನ್ನಭಾಗ್ಯಯೋಜನೆ ಹೆಚ್ಚುವರಿ ಅಕ್ಕಿ ಎದುರಾಗಿ ಪ್ರತಿ ಫಲಾನುಭವಿಗೆರೂ. 170/-, ಇಬ್ಬರು ಸದಸ್ಯರಿದ್ದಲ್ಲಿ ರೂ.340/- , ಮೂರು ಸದಸ್ಯರಿದ್ದಲ್ಲಿ ರೂ.510/-, 04 ಸದಸ್ಯರಿದ್ದಲ್ಲಿ ರೂ.680/-, 05 ಸದಸ್ಯರಿದ್ದಲಿ ್ಲರೂ .850/-, 06 ಸದಸ್ಯರಿದ್ದಲ್ಲಿ ರೂ.1020-, 07 ಸದಸ್ಯರಿದ್ದಲ್ಲಿ ರೂ.1190/- 08 ಸದಸ್ಯರಿದ್ದಲ್ಲಿ ರೂ.1360/- /-ಹೀಗೆ ಸದಸ್ಯರ ಸಂಖ್ಯೆ ಆದರಿಸಿ ಲೆಕ್ಕಾಚಾರಮಾಡಿ ಫಲಾನುಬವಿಗಳ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮಾಡಲಾಗುವುದು.
ನೇರ ನಗದು ವರ್ಗಾವಣೆಗೆ(ಆಃಖಿ) ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ, ಮೊಬೈಲ್ ಸಂಖ್ಯೆಜೋಡಣೆ(e-ಏಙಅ)ಯಾಗಿರತಕ್ಕದ್ದು ಹಾಗೂ ಆ ಬ್ಯಾಂಕ್‍ಖಾತೆಯು ಸಕ್ರೀಯ (ಂಛಿಣive) ಬ್ಯಾಂಕ್ ಖಾತೆಯಾಗಿರಬೇಕು. ಫಲಾನುಭವಿಯು ಕಳೆದ 03 ತಿಂಗಳಲ್ಲಿ ಒಂದು ಸಲ ಆದರೂ ನ್ಯಾಯಬೆಲೆ ಅಂಗಡಿಯಲ್ಲಿ ಬಯೋ ನೀಡಿ ಪಡಿತರ ಪಡೆದಿರಬೇಕು.
ಅರ್ಹ ಇರುವ ಜಿಲ್ಲೆಯ ಒಟ್ಟು 8,29,001 ಫಲಾನುಭವಿಗಳಿಗೆ ನಿಯಮಾನುಸಾರ ರೂ. 46,54,18,520/-ಗಳನ್ನು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮೊತ್ತ ಜಮೆ ಮಾಡಲಾಗಿದ್ದು ಈ ಕುರಿತು ಫಲಾನುಭವಿಗಳ ಮಾಹಿತಿಗಾಗಿ ಅವರ ಮೊಬೈಲ್‍ಗಳಿಗೆ ಸಂದೇಶ (ಎಸ್.ಎಮ್.ಎಸ್) ರವಾನೆಯಾಗಿದ್ದು ಖಚಿತ ಪಡಿಸಿಕೊಳ್ಳಬಹುದಾಗಿರುತ್ತದೆ.

ಒಂದು ವೇಳೆ ಫಲಾನುಭವಿಗಳ ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆಯು ಬ್ಯಾಂಕ್ ಖಾತೆಗೆ ಜೋಡಣೆ ಇಲ್ಲದ ಪ್ರಕರಣಗಳು ತಕ್ಷಣವೇ ಸಂಬಂಧಿಸಿದ ಬ್ಯಾಂಕ್‍ಗೆ ಸಂಪರ್ಕಿಸಿ ಇ-ಕೆ.ವಾಯ್.ಸಿ ಅಥವಾ ಹೊಸ ಖಾತೆ ಒಪನ್ ಮಾಡಿಸಬಹುದು. ಇಂತಹ ಫಲಾನುಭವಿಗಳಿಗೆ ಮುಂಬರುವ ಮಾಹೆಗಳಲ್ಲಿ ನೇರ ನಗದು ಮೊತ್ತ ಜಮೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ದ್ರಾಕ್ಷಿ, ದಾಳಿಂಬೆ, ಮಾವು ಹಾಗೂ ಮೆಣಸಿನಕಾಯಿ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ಜು.31 ಕೊನೆ ದಿನ

ಬೆಳಗಾವಿ, ಜು.20 : ಮುಂಗಾರು-2023 ನೇ ಹಂಗಾಮಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ದ್ರಾಕ್ಷಿ, ದಾಳಿಂಬೆ, ಮಾವು ಹಾಗೂ ಹಸಿ ಮೆನಸಿಣಕಾಯಿ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಬಹುದಾಗಿದೆ.
ಅಥಣಿ ತಾಲ್ಲೂಕಿಗೆ ದ್ರಾಕ್ಷಿ ಹಾಗೂ ದಾಳಿಂಬೆ, ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿಗೆ ಮಾವು ಹಾಗೂ ಹಸಿಮೆಣಸಿನಕಾಯಿ, ಬೆಳಗಾವಿ ತಾಲ್ಲೂಕಿಗೆ ಮಾವು ಬೆಳೆ, ಚಿಕ್ಕೋಡಿ ನಿಪ್ಪಾಣಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆ, ಗೋಕಾಕ ಮೂಡಲಗಿ ತಾಲ್ಲೂಕಿನ ಕೌಜಲಗಿ ಹೋಬಳಿಗೆ ದ್ರಾಕ್ಷಿ ಬೆಳೆ, ಗೋಕಾಕ ಹೋಬಳಿಗೆ ಮಾವು, ಗೋಕಾಕ, ಅರಭಾಂವಿ ಹಾಗೂ ಕೌಜಲಗಿ ಹೋಬಳಿಗಳಿಗೆ ಹಸಿಮೆಣಸಿನಕಾಯಿ ಬೆಳೆ, ಹುಕ್ಕೇರಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆ, ಖಾನಾಪೂರ ತಾಲ್ಲೂಕಿನ ಖಾನಾಪೂರ ಹಾಗೂ ಬೀಡಿ ಹೋಬಳಿಗಳಿಗೆ ಮಾವು, ರಾಯಬಾಗ ತಾಲೂಕಿಗೆ ದ್ರಾಕ್ಷಿ, ರಾಮದುರ್ಗ ತಾಲ್ಲೂಕಿನ ಮುದಕವಿ, ಕೆ, ಚಂದರಗಿ, ಕಟಕೋಳ, ಹೋಬಳಿಗಳಿಗೆ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆ ಮತ್ತು ಸವದತ್ತಿ ಯರಗಟ್ಟಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆಗಳಿಗೆ ಜುಲೈ.31 2023 ರೊಳಗಾಗಿ ಬೆಳೆ ವಿಮಾ ಪಾವತಿಸಲು ಕೊನೆಯ ದಿನಾಂಕವಾಗಿರುತ್ತದೆ.
ಪ್ರತಿ ಹೆಕ್ಟೇರ್, ದ್ರಾಕ್ಷಿ ಬೆಳೆಗೆ ರೂ. 14000/-, ದಾಳಿಂಬೆ ಬೆಳೆಗೆ ರೂ. 6350/-, ಮಾವು ಬೆಳೆಗೆ ರೂ. 4000/- ಹಾಗೂ ಹಸಿಮೆಣಸಿನಕಾಯಿ ಬೆಳೆಗೆ ರೂ. 3550/- ರಂತೆ ರೈತರ ವಂತಿಕೆಯ ವಿಮಾ ಕಂತು ಸರ್ಕಾರದ ಅಧಿಸೂಚನೆ ಯಂತೆ ನಿಗದಿಯಾಗಿರುತ್ತದೆ.
ಈ ಯೋಜನೆಗಳಿಗೆ ಸಂಬಂಧಪಟ್ಟಂತೆ ಅಧಿಸೂಚಿತ ಗ್ರಾಮ ಪಂಚಾಯತಿ/ಹೋಬಳಿವಾರು ಬೆಳೆಗಳ ವ್ಯಾಪ್ತಿಯ ಕುರಿತು ಸಂಬಂಧಪಟ್ಟ ತಾಲ್ಲೂಕು ಮತ್ತು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ, ಗ್ರಾಮ-ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಎಮೆ ಕಂತು ಪಾವತಿಸಬಹುದು.
ಅಧಿಸೂಚಿತ ಬೆಳೆಗಳಿಗೆ ಸಾಲ ಪಡೆದ ರೈತರ ವಂತಿಕೆಯನ್ನು ಸಾಲ ಪಡೆದ ಬ್ಯಾಂಕ್‍ಗಳಿಂದಲೇ ವಿಮಾ ಮೊತ್ತ ಕಟಾವುಗೊಳಿಸಲಾಗುವುದು, ಆಕ್ಷೇಪಣೆಗಳಿದ್ದಲ್ಲಿ ಕೂಡಲೆ ಬ್ಯಾಂಕ್‍ಗಳನ್ನು ಸಂಪರ್ಕಿಸಬೇಕು. ಬೆಳಗಾವಿ ಜಿಲ್ಲೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಖಿಂಖಿಂ ಂIಉ ಉIಅ ಕಂಪನಿಯು ಅಧಿಸೂಚಿತ ವಿಮಾ ಕಂಪನಿಯಾಗಿರುತ್ತದೆ. ರೈತರು ಈ ಯೋಜನೆಯ ಸದುಪಯೋಗ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿ/ತಾಲ್ಲೂಕೂ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: ಬೆಳಗಾವಿ: 0831-2431559, ಗೋಕಾಕ: 08332-229382, ಖಾನಾಪೂರ: 08336-223387, ಸವದತ್ತಿ: 08330-222082, ಅಥಣಿ: 08289-285099, ರಾಮದುರ್ಗ: 08335-241512, ರಾಯಬಾಗ : 08331-225049, ಹುಕ್ಕೇರಿ : 08333-265915 ಚಿಕ್ಕೋಡಿ : 08338-274943, ಬೈಲಹೊಂಗಲ : 08288-233758 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ತೋಟಗಾರಿಕೆ’ ಉಪನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

2022-23 ನೇ ಸಾಲಿನ ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆ

ಬೆಳಗಾವಿ, ಜು.20 : ಪರೀಕ್ಷಾ ಸಂಧರ್ಭದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಕಾರ್ಯಗಳು, ಪ್ರಶ್ನೆ ಪತ್ರಿಕೆ ತಯಾರಿ, ನಾಮಿನಲ್ ರೂಲ್ ಸಿದ್ಧಪಡಿಸುವುದು, ಪ್ರವೇಶಪತ್ರ ಸಿದ್ಧಪಡಿಸಿ ವಿತರಿಸುವುದು, ಪರೀಕ್ಷಾ ಕೇಂದ್ರಗಳ ಗುರುತಿಸುವಿಕೆ, ಮುಖ್ಯ ಅಧೀಕ್ಷಕರು ಮತ್ತು ಕೊಠಡಿ ಮೇಲ್ವಿಚಾರಕರ ನೇಮಕ, ಮಾರ್ಗಾಧಿಕಾರಿಗಳ ನೇಮಕ, ಪರೀಕ್ಷೆಗೆ ನೋಂದಣಿಯಾದ ಎಲ್ಲ ಕಲಿಕಾರ್ಥಿಗಳು ಕಡ್ದಾಯವಾಗಿ ಹಾಜರಾಗುವಂತೆ ಃಖಅ, ಃಖP, ಮತ್ತು ಅಖP ಗಳು ಕ್ರಮವಹಿಸುವಿಕೆ, ಎಲ್ಲ ಕಲಿಕಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗುವಂತೆ ಮಾಡುವಲ್ಲಿ ಬೋಧಕರ ಪಾತ್ರ ಮಹತ್ವದ್ದಾಗಿದ್ದು, ಬೋಧಕರು ಕಲಿಕಾರ್ಥಿಗಳ ಮನವೊಲಿಸಿ ಎಲ್ಲರೂ ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಎ.ಎಂ.ಜಯಶ್ರೀ ಅವರು ತಿಳಿಸಿದರು.
ಹಾಗೇ ಕಲಿಕಾರ್ಥಿಗಳಿಗೆ ನೋಂದಣಿ ಸಂಖ್ಯೆ ನೀಡುವ ವಿಧಾನದ ಕುರಿತು ಮತ್ತು ಪರೀಕ್ಷೆಯ ಕಾರ್ಯವನ್ನು ಯಾವುದೇ ಲೋಪಗಳಾಗದಂತೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಅವರು ಸೂಚನೆಗಳನ್ನು ನೀಡಿದರು.

2022-23 ನೇ ಸಾಲಿನ ಜಿಲ್ಲಾ ವಲಯ ಲಿಂಕ್ ಅನುದಾನದಡಿ ಮತ್ತು ಸಾವಿರ ಗ್ರಾಮ ಪಂಚಾಯತಗಳ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮಗಳ ಪರೀಕ್ಷೆಯ ತಯಾರಿಯ ಪೂರ್ವ ಭಾವಿ ಸಭೆಯನ್ನು ಜುಲೈ.18 2023 ರಂದು ಪ್ರಾಚಾರ್ಯರು ಡಯಟ್ ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಮರಾಠಿ ಶಾಲೆ ನಂ-5 ಚಾವಟಗಲ್ಲಿ ಇಲ್ಲಿ ಆಯೋಜಿಸಲಾಯಿತು.
ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಯಟ್ ನ ಹಿರಿಯ ಉಪನ್ಯಾಸಕರು ಪರೀಕ್ಷಾ ಪೂರ್ವ ತಯಾರಿ ಕಾರ್ಯದ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಪರೀಕ್ಷಾ ಪೂರ್ವ ತಯಾರಿಯಲ್ಲಿ ಕೈಗೊಳ್ಳಬಹುದಾದ ಕಾರ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ಅಧ್ಯಕ್ಷ ಸ್ಥಾನ ವಹಿಸಿದ ಪ್ರಾಚಾರ್ಯರು ನೀಡಿದರು. ಪರೀಕ್ಷಾ ಕೇಂದ್ರಗಳ ಗುರುತಿಸುವಿಕೆ, ಮುಖ್ಯ ಅಧೀಕ್ಷಕರು ಮತ್ತು ಕೊಠಡಿ ಮೇಲ್ವಿಚಾರಕರ ನೇಮಕ, ಮಾರ್ಗಾಧಿಕಾರಿಗಳ ನೇಮಕ, ಪ್ರಶ್ನೆ ಪತ್ರಿಕೆ ತಯಾರಿ, ಪರೀಕ್ಷೆಗೆ ನೊಂದಣಿಯಾದ ಎಲ್ಲ ಕಲಿಕಾರ್ಥಿಗಳು ಕಡ್ದಾಯವಾಗಿ ಹಾಜರಾಗುವಂತೆ ಕ್ರಮವಹಿಸಲು ಸೂಚನೆ ನೀಡಿದರು. ಪರೀಕ್ಷೆಯ ಪಾವಿತ್ರತೆಯನ್ನು ಕಾಪಾಡಿಕೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಿದರು.
ಡಯಟ್‍ನ ಹಿರಿಯ ಉಪನ್ಯಾಸಕರು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ತಾಲ್ಲೂಕಾ ನೋಡಲ್ ರವರಾದ ಃಖಅ ಯವರು, ಃಖP,ಯವರು ಹಾಗೂ ಕಾರ್ಯಕ್ರಮ ಸಹಾಯಕರು ಸಭೆಯಲ್ಲಿ ಭಾಗವಹಿಸಿದ್ದರು.////