Belagavi News In Kannada | News Belgaum

ಕಡಿಮೆ ದರದಲ್ಲಿ ವಿವಿಧ ಹಣ್ಣಿನ ಕಸಿ/ಸಸಿಗಳು ಲಭ್ಯ

ಬೆಳಗಾವಿ, ಜು.21 : ಬೆಳಗಾವಿ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಕøಷ್ಟ ಗುಣಮಟ್ಟದ ವಿವಿಧ ಹಣ್ಣಿನ ಕಸಿ/ಸಸಿಗಳನ್ನು ಉತ್ಪಾದನೆ ಮಾಡಲಾಗಿದ್ದು, ಸದರಿ ಸಸಿಗಳು ಕಡಿಮೆ ದರದಲ್ಲಿ ಲಭ್ಯವಿರುವುದರಿಂದ ರೈತರು, ಸಾರ್ವಜನಿಕರು ಆಯಾ ತೋಟಗಾರಿಕೆ ಕ್ಷೇತ್ರಗಳ ಅಧಿಕಾರಿ,ಸಿಬ್ಬಂದಿಯವರನ್ನು ಸಂಪರ್ಕಿಸಿ ಕಸಿ/ಸಸಿಗಳನ್ನು ಪಡೆದುಕೊಳ್ಳಬಹುದಾಗಿದೆ.

ತೋ. ಕ್ಷೇತ್ರ ತಾ. ಸವದತ್ತಿ, ವ್ಯಾಪ್ತಿಯ ಕುರವಿನಕೊಪ್ಪ ಹಾಗೂ ಮುನವಳ್ಳಿ ಗ್ರಾಮಸ್ಥರು ಲಿಂಬು, ಕರಿಬೇವು, ತೆಂಗು ಸಸಿಗಳನ್ನು ಪಡೆಯಲು ತೋಟಗಾರಿಕೆ ಕ್ಷೇತ್ರಗಳ ಅಧಿಕಾರಿ,ಸಿಬ್ಬಂದಿ ಮೋ ನಂ 9108280642, 9986217919, ತೋ. ಕ್ಷೇತ್ರ ತಾ. ಸವದತ್ತಿ ವ್ಯಾಪ್ತಿಯ ಯಕ್ಕೇರಿ ಹಾಗೂ ಉಗರಗೋಳ ಗ್ರಾಮಸ್ಥರು ಮಾವು, ಚಿಕ್ಕು, ಪೇರಲ, ಲಿಂಬೆ, ಕರಿಬೇವು, ಸೀತಾಫಲ ಸಸಿಗಳನ್ನು ಪಡೆಯಲು ಮೋ ನಂ 7795141855, 9740757787, 9902056969, ತೋ ಕ್ಷೇತ್ರ ತಾ:ಹುಕ್ಕೇರಿ ವ್ಯಾಪ್ತಿಯ ಹಿಡಕಲ್ ಗ್ರಾಮಸ್ಥರು ಮಾವು (ಕೇಸರ್), ಪೇರಲ, ನೇರಳೆ, ಕರಿಬೇವು, ಲಿಂಬು, ತೆಂಗು, ಸೀತಾಫಲ ಸಸಿಗಳನ್ನು ಪಡೆಯಲು ಮೋ ನಂ 9008045670 9632196161, ಗೆ ಸಂಪರ್ಕಿಸಿ ಪಡೆದುಕೊಳ್ಳಬಹುದು.

ತೋ. ಕ್ಷೇತ್ರ ಶೇಡಗಳ್ಳಿ ಗ್ರಾಮಸ್ಥರು ಮಾವು ಲಿಂಬು, ಕರಿಬೇವು, ಗೋಡಂಬಿ ಮೋ ನಂ 9480409393, ತೋ. ಕ್ಷೇತ್ರ ತಾ:ಕಿತ್ತೂರ ವ್ಯಾಪ್ತಿಯ ಕಿತ್ತೂರÀ ಗ್ರಾಮಸ್ಥರು ಲಿಂಬು ಕಸಿ/ಸಸಿಗಳನ್ನು ಪಡೆಯಲು ಮೋ ನಂ 8618015584, ತೋ. ಕ್ಷೇತ್ರ ತಾ:ಗೋಕಾಕ ವ್ಯಾಪ್ತಿಯ ಧೂಪಧಾಳ ಗ್ರಾಮಸ್ಥರು ಮಾವು, ಪೇರಲ, ನೇರಳೆ, ಚಿಕ್ಕು ಸಸಿಗಳನ್ನು ಪಡೆಯಲು ಮೋ ನಂ. 9880105966, 8095611441, ತಾ. ಬೆಳಗಾವಿ ವ್ಯಾಪ್ತಿಯ ಜಿಲ್ಲಾ ನರ್ಸರಿ, ಬೆಳಗಾವಿ ಅಲಂಕಾರಿಕ ಸಸಿಗಳನ್ನು ಪಡೆಯಲು ನಂ 9902377978 ಗೆ ಸಂಪರ್ಕಿಸಿ ಪಡೆದುಕೊಳ್ಳಬಹುದು.

ಇಲಾಖೆ ಮಾರಾಟ ದರಗಳು ಪ್ರತಿ ಕಸಿ/ಸಸಿಗೆ (ರೂಪಾಯಿಗಳಲ್ಲಿ) ಮಾವು ರೂ.36, ಪೇರಲ ರೂ.45, ನೇರಳೆ ರೂ.37, ಕರಿಬೇವು ರೂ.12, ಲಿಂಬು ರೂ.11, ತೆಂಗು (ಅರಸಿಕೇರಿ ಟಾಲ್ ) ರೂ75, ತೆಂಗು (ಹೈಬ್ರಿಡ್ ಖಿ x ಆ) ರೂ.170, ಸೀತಾಫಲ ರೂ.32, ಚಿಕ್ಕು ರೂ.56. ರೂಪಾಯಿಗಳಿಗೆ ಲಭ್ಯವಿರುತ್ತವೆ

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಚನ್ನಮ್ಮ ವೃತ್ತ, ಬೆಳಗಾವಿ ರವರ ಕಛೇರಿಗೆ ದೂ ಸಂಖ್ಯೆ. 0831-2451422 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು (ರಾವ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.