ಜು.24 ರಿಂದ ವಿವಿಧ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ.

ಬೆಳಗಾವಿ, ಜು.21- : ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಜು.25 ರಿಂದ 30 ರವರೆಗೆ ಭೇಟಿ ನೀಡಲಿದ್ದಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಸದರಿ ಸರ್ಕಾರಿ ಕೆಲಸ ನಿರ್ವಹಿಸಲು ಹಣ, ಲಂಚ, ವಸ್ತುಗಳ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಬಹುದು..
ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕುವಾರು ಭೇಟಿ ವಿವರ:
ಕರ್ನಾಟಕ ಲೋಕಾಯುಕ್ತ ಪಿಐ ಅನ್ನಪೂರ್ಣ ಎಮ್. ಹುಲಗೂರ ಇವರು ಜು.24 ರಂದು 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ಕಿತ್ತೂರ, ಕರ್ನಾಟಕ ಲೋಕಾಯುಕ್ತ ಎ.ಆರ್.ಕಲಾದಗಿ, ಜು.25 ರಂದು ಮುಂಜಾನೆ 11 ಗಂಟೆಯಿಂದ 2 ಗಂಟೆಯ ವರೆಗೆ ಪ್ರವಾಸಿ ಮಂದಿರ ನಿಪ್ಪಾಣಿ,
ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಜು.25 ರಂದು ಮುಂಜಾನೆ 10:30 ರಿಂದ 1 ಗಂಟೆವರೆಗೆ ಪ್ರವಾಸಿ ಮಂದಿರ ಗೋಕಾಕ, ಡಿ.ಎಸ್.ಪಿ. ಬಿ.ಎಸ್ ಪಾಟೀಲ, ಜು.25 ರಂದು ಮುಂಜಾನೆ 11 ಗಂಟೆಯಿಂದ 2 ವರೆಗೆ ಕ. ಲೋ. ಕಛೇರಿ ಬೆಳಗಾವಿ, ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಜು.25 ರಂದು ಮದ್ಯಾಹ್ನ 2 ರಿಂದ 4.30 ಗಂಟೆವರೆಗೆ ತಹಸೀಲ್ದಾರ ಕಚೇರಿ ಮೂಡಲಗಿ ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ..
ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ.ಭರತ ಎಸ್ ಆರ್ ಇವರು ಜು.26 ರಂದು 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಬೈಲಹೊಂಗಲ, ಅನ್ನಪೂರ್ಣ ಎಮ್. ಹುಲಗೂರ ಇವರು ಜು.26 ರಂದು 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ಖಾನಾಪೂರ, ಕರ್ನಾಟಕ ಲೋಕಾಯುಕ್ತ ಪಿಐ ಪಿ.ರವಿಕುಮಾರ ಧರ್ಮಟ್ಟಿ ಇವರು ಜು.26 ರಂದು ಮುಂಜಾನೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಅಥಣಿ ಭೇಟಿ ನೀಡಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..