ಜೈನಾಪುರ ಗ್ರಾಪಂ ಅಧ್ಯಕ್ಷರಾಗಿ ಲಕ್ಷ್ಮೀ, ಉಪಾಧ್ಯಕ್ಷರಾಗಿ ಅವಕ್ಕಾ ಆಯ್ಕೆ

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಲಕ್ಷ್ಮೀ ಅಶೋಕ ಮಜಲಟ್ಟಿ ಹಾಗೂ ಉಪಾಧ್ಯಕ್ಷರಾಗಿ ಅವಕ್ಕಾ ಕೃಷ್ಣಪ್ಪ ಜೋಗೆ ಅವರು ಆಯ್ಕೆಯಾಗಿದ್ದಾರೆ..
ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಮಜಲಟ್ಟಿ ಮತ್ತು ತಮ್ಮಣ್ಣ ಘರಬುಡೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಕ್ಕಾ ಜೋಗೆ ಮತ್ತು ಸುಮಿತ್ರಾ ನಾಗರಾಳೆ ತಲಾ ಎರಡು ನಾಮಪತ್ರಗಳನ್ನು ಸಲ್ಲಿಕೆ ಮಾಡಿದರು..
ಮತದಾನದ ಪ್ರಕ್ರಿಯೆಯಲ್ಲಿ ಒಟ್ಟು 16 ಗ್ರಾಪಂ ಸದಸ್ಯರ ಪೈಕಿ 9 ಜನ ಗ್ರಾಪಂ ಸದಸ್ಯರು ಲಕ್ಷ್ಮೀ ಮಜಲಟ್ಟಿ ಹಾಗೂ ಅವಕ್ಕಾ ಜೋಗೆ ಅವರಿಗೆ ಮತ ನೀಡುವ ಮೂಲಕ ಆಯ್ಕೆ ಮಾಡಿದರು. .
ತಮ್ಮಣ್ಣ ಘರಬುಡೆ ಹಾಗೂ ಸಮಿತ್ರಾ ನಾಗರಾಳೆ 7 ಮತಗಳನ್ನು ಪಡೆದು ಸೋಲು ಕಂಡರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಬಸವರಾಜ ಮಾಳಗೆ, ಅನಿಲ ಪಾಟೀಲ, ಮುಖಂಡರಾದ ಕೃಷ್ಣಪ್ಪ ಜೋಗೆ, ಅಶೋಕ ಮಜಲಟ್ಟಿ ಮತ್ತಿತರರು ಉಪಸ್ಥಿತರಿದ್ದರು..