Belagavi News In Kannada | News Belgaum

ಮುಂಗಾರು ಹಂಗಾಮಿನ ಬೆಳೆ: ವಿಮೆ ಕಂತು ಪಾವತಿ.

ಬೆಳಗಾವಿ, ಜು.21- : ಮುಂಗಾರು ಹಂಗಾಮಿಗೆ 2023 24ನೇ ಸಾಲಿನ ಬೆಳಗಾವಿ ತಾಲ್ಲೂಕಿನ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಬೆಳಗಾವಿ ತಾಲ್ಲೂಕಿನ ಕಾಕತಿ, ಉಚಗಾಂವ, ಮತ್ತು ಬೆಳಗಾವಿ ಹೋಬಳಿಗಳಿಗೆ ಆಲೂಗಡ್ಡೆ ಮಳೆಯಾಶ್ರಿತ ಮತ್ತು ಕೇವಲ ಕಾಕತಿ ಹೋಬಳಿಗೆ ಟೊಮ್ಯಾಟೊ ಬೆಳೆಗೆ ಅಧಿಸೂಚನೆಗೊಂಡಿರುತ್ತವೆ, ಆಲೂಗಡ್ಡೆ ಮಳೆಯಾಶ್ರಿತ ಬೆಳೆಗೆ ರೂ. 1445 ಪ್ರತಿ ಹೆಕ್ಟೇರ್, ಟೊಮ್ಯಾಟೊ ಬೆಳೆಗೆ ರೂ. 4457 ಪ್ರತಿ ಹೆಕ್ಟೇರ್‍ಗೆ, ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿರುತ್ತದೆ..

ಮುಂದುವರೆದು ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಬೆಳಗಾವಿ ತಾಲ್ಲೂಕಿಗೆ ಮಾವು ಬೆಳೆ ಅಧಿಸೂಚನೆಗೊಂಡಿರುತ್ತದೆ. ಅದರಂತೆ ಮಾವು ಬೆಳೆಗೆ ರೂ.4000 ಪ್ರತಿ ಹೆಕ್ಟರ್‍ಗೆ ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿರುತ್ತದೆ. ಆದ್ದರಿಂದ ಆಸಕ್ತ ರೈತರು ಆಲೂಗಡ್ಡೆ ಮಳೆಯಾಶ್ರಿತ, ಟೊಮ್ಯಾಟೊ ಮತ್ತು ಮಾವು ಬೆಳೆಗೆ ಜು.31 2023ರ ರೊಳಗಾಗಿ ವಿಮೆ ಕಂತು ಪಾವತಿಸಲು ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ..

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ತಾಲ್ಲೂಕಿನ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂಬ ಬೆಳಗಾವಿ ಜಿ.ಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..