ಇಂದು ಬೆಳಗಾವಿ ನಾಗರಿಕರ ವಾರ್ಡ್ ಸಮಿತಿ ಬಳಗದ ವತಿಯಿಂದ ವಾರ್ಡ್ ಸಮಿತಿ ಕುರಿತು ಮಾಹಿತಿ ತಿಳಿಸಿದ

ಬೆಳಗಾವಿ ನಾಗರಿಕರ ವಾರ್ಡ್ ಸಮಿತಿ ಬಳಗದ ವತಿಯಿಂದ ಬೆಳಗಾವಿ ನಗರಕ್ಕೆ ನೂತನವಾಗಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ ಎಸ್ ಎನ್ ಸಿದ್ದರಾಮಪ್ಪ ಮತ್ತು ಉಪ ಪೊಲೀಸ್ ಆಯುಕ್ತ (ಅಪರಾಧ) ಪಿ ವಿ ಸ್ನೇಹಾ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿ ನಾಗರಿಕರ ವಾರ್ಡ್ ಸಮಿತಿ ಕುರಿತು ಮಾಹಿತಿ ತಿಳಿಸಿದ ಕುರಿತು ಸಚಿತ್ರ ಮಾಧ್ಯಮ ವರದಿ
ಕರ್ನಾಟಕ ವಾರ್ಡ್ ಸಮಿತಿ ಬಳಗದ ಆಶ್ರಯದಲ್ಲಿ ಬೆಳಗಾವಿ ನಾಗರಿಕರ ವಾರ್ಡ್ ಸಮಿತಿ ಬಳಗವು ಕಳೆದ ಎರಡು ವರ್ಷಗಳಿಂದ ಸತತವಾಗಿ ಬೆಳಗಾವಿ ಮಹಾನಗರದ ಅನೇಕ ವಾರ್ಡ ಗಳಲ್ಲಿ, ಭಾರತದ ಸಂವಿಧಾನದ 74ನೇ ತಿದ್ದುಪಡಿಯ ಪ್ರಕಾರ, ಸ್ಥಳೀಯ ಆಡಳಿತದಲ್ಲಿ ನಾಗರಿಕರು ಪಾಲ್ಗೊಳ್ಳಲು ಅವಕಾಶ ನೀಡುವ ಕಾನೂನಿನ ಅನ್ವಯ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯು ಕೆಎಂಸಿ ಕಾಯ್ದೆ ಸೆಕ್ಷನ್ 13 (ಏಚ್) ರ ಪ್ರಕಾರ, ಶಾಸನಾತ್ಮಕವಾಗಿ ಕಡ್ಡಾಯವಾದ ನಾಗರಿಕರ ವಾರ್ಡ್ ಸಮಿತಿ ರಚಿಸಲೇ ಬೇಕಾಗಿರುವ ಕಾನೂನು ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದೆ.
ಈ ಅಭಿಯಾನದ ಮುಂದುವರಿದ ಭಾಗವಾಗಿ ಇಂದು ಬೆಳಗಾವಿ ನಾಗರಿಕರ ವಾರ್ಡ್ ಸಮಿತಿಯ ನಿಯೋಗವು ಬೆಳಗಾವಿ ಮಹಾನಗರಕ್ಕೆ
ನೂತನವಾಗಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ ಎಸ್ ಎನ್ ಸಿದ್ದರಾಮಪ್ಪನವರನ್ನು ಮತ್ತು ಉಪ ಪೊಲೀಸ್ ಆಯುಕ್ತ (ಅಪರಾಧ) ಪಿ. ವಿ. ಸ್ನೇಹಾ ಮೇಡಂ ಅವರನ್ನು ಭೇಟಿ ಮಾಡಿ ಶುಭಾಶಯಗಳನ್ನು
ಕೋರಲಾಯಿತು.
ನಂತರ, ಸಂವಿಧಾನಾತ್ಮಕವಾಗಿ ಮತ್ತು ಶಾಸನಾತ್ಮಕವಾಗಿ ಪಾಲಿಕೆಯಿಂದ ಕಡ್ಡಾಯವಾಗಿ ರಚಿಸಲೇ ಬೇಕಾಗಿರುವ ನಾಗರಿಕರ ವಾರ್ಡ್ ಸಮಿತಿಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ನಮ್ಮ ಬಳಗದ ನಿಯೋಗದ ಈ ಮಾಹಿತಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಈ ಜನಪರ ಕಾನೂನಿನ ಕುರಿತು ಬೆಳಗಾವಿ ನಾಗರಿಕರಲ್ಲಿ ಜನಜಾಗೃತಿ ಮೂಡಿಸುತ್ತಿರುವ ಕಾರ್ಯವನ್ನು ಪ್ರಶಂಶಿಸಿದರು. ಈ ಸತ್ಕಾರ್ಯದಲ್ಲಿ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದರು.
ಬೆಳಗಾವಿ ವಾರ್ಡ್ ಸಮಿತಿ ಬಳಗದ ನಿಯೋಗದಲ್ಲಿ ಸಹ-ಸಂಚಾಲಕರಾದ ಪ್ರೇಮ್ ಮಲ್ಲಪ್ಪ ಚೌಗಲಾ, ಮುರಿಗೆಪ್ಪ ಎಂ. ಬಾಳಿ, ಚಂದ್ರಕಾಂತ ಅಪ್ಪಣ್ಣವರ್, ಅನಿಲ್ ಚೌಗಲಾ, ಪ್ರಮೋದ್ ಗುಂಜಿಕರ್ ಉಪಸ್ಥಿತರಿದ್ದರು.