ಬೆಳಗಾವಿಯಲ್ಲಿ ಐತಿಹಾಸಿಕ ಗೋಡೆ ಕುಸಿತ

ಬೆಳಗಾವಿ: ಪಟ್ಟಣದ ಐತಿಹಾಸಿಕ ಕೋಟೆಗೆ ನಿರ್ಮಿಸಲಾದ ತಡೆಗೋಡೆಯ ಒಂದು ಭಾಗ ಭಾರಿ ಮಳೆಯಿಂದಾಗಿ ಸೋಮವಾರ ಕುಸಿದು ಬಿದ್ದಿದೆ.
ಹೌದು….. ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ ಐತಿಹಾಸಿಕ ಕೋಟೆ ಎಂದೇ ಹೆಸರಾದ ಕಿತ್ತೂರು ರಾಣಿ ಚೆನ್ನಮ್ಮ ಕೋಟೆಯ ಗೋಡೆ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ..
ಕಳೆದ ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವುದರಿಂದ ಕೋಟೆಯ ಗೋಡೆಗಳು ಶಿಥಿಲಗೊಂಡಿವೆ. ಐತಿಹಾಸಿಕ ಕೋಟೆಯ ಗೋಡೆ ಕುಸಿತವಾಗಿದೆ. ಈ ಹಿಂದೆಯೂ ಸಹ ರಭಸದ ಮಳೆಯಿಂದಾಗಿ ತಡೆಗೋಡೆ ಕುಸಿದು ಬಿದ್ದಿತ್ತು.
ನಂತರ ತಡಗೋಡೆಯನ್ನು ನೂತನವಾಗಿ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು..
ಸದ್ಯ ಕೋಟೆ ಆವರಣದ ಆವರಣದ ಹೊರಗಡೆ ಗೋಡೆ ಕಳಚಿ ಬಿದ್ದಿದೆ. ಮಳೆಯ ಆರ್ಭಟ ಹೀಗೆ ಮುಂದುವರೆದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗೋಡೆ ಕಳಚಿ ಬೀಳಲಿದೆ ಎನ್ನಲಾಗುತ್ತಿದೆ. ಹೀಗಾಗಿ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ..