Belagavi News In Kannada | News Belgaum

ಬೆಳಗಾವಿಯಲ್ಲಿ ಭಾರಿ ಮಳೆಯಿಂದ ಮೂರು ಸೇತುವೆಗಳ ಸಂಚಾರ ತೆಗಿತಗೊಳಿಸಲಾಗಿದೆ

ಮೂಡಲಗಿ: ಪಶ್ಚಿಮಘಟ್ಟ ಹಾಗೂ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಮೂಡಲಗಿ ತಾಲೂಕಿನ ಮೂರು ಸೇತುವೆಗಳು ಸೋಮವಾರ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ..

 

ಭಾರಿ ಮಳೆಯಿಂದ ಘಟಪ್ರಭಾ, ಹಿರಣ್ಯಕೇಶಿ, ಮಾಕರ್ಂಡೇಯ ಹಾಗೂ ಬಳ್ಳಾರಿ ನಾಲಾ ಸೇರಿ ಘಟಪ್ರಭಾ ನದಿಗೆ ನೀರು ಬರುತ್ತಿದ್ದು,  ಘಟಪ್ರಭಾ ನದಿ ನೀರಿನ ಮಟ್ಟ ಏರಿಕೆಯಾಗಿದೆ..

 

ತಾಲೂಕಿನ ಅವರಾದಿ ಹಾಗೂ ಮಹಾಲಿಂಗಪೂರಕ್ಕೆ ಸಂಪರ್ಕ ಕಲ್ಪಿಸುವ ಅವರಾದಿ ಸೇತುವೆ, ಸುಣಧೋಳಿ ಹಾಗೂ ಮೂಡಲಗಿಗೆ ಸಂಪರ್ಕ

ಕಲ್ಪಿಸುವ ಸುಣಧೋಳಿ ಸೇತುವೆ, ವಡೇರಹಟ್ಟಿ ಹಾಗೂ ಉದಗಟ್ಟಿಗೆ ಸಂಪರ್ಕ ಕಲ್ಪಿಸುವ ವಡೇರಹಟ್ಟಿ ಸೇತುವೆಗಳು ಜಲಾವೃತಗೊಂಡ ಪರಿಣಾಮ ಹಲವು ಸಂಚಾರ ಸ್ಥಗಿತಗೊಂಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ..