ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶಾತಿಗಾಗಿ ಅರ್ಜಿ ಅಹ್ವಾನ

ಬೆಳಗಾವಿ, ಜು.27 : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2023 24 ಸಾಲಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಥಮ ಪಿ.ಯು.ಸಿ (ಪಿ.ಸಿ.ಎಂ.ಬಿ) ವಿಜ್ಞಾನ ವಿಭಾಗ ಮತ್ತು ವಾಣಿಜ್ಯ (ಸಿ.ಇ.ಟಿ.ಎ) ವಿಭಾಗದ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ..
ಬೆಳಗಾವಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತಿಕರಣಗೊಂಡ ಬೆಳಗಾವಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೋ ನಂ 7406516596, ಮೂಡಲಗಿ ವಸತಿ ಶಾಲೆಯ ಮೋ ನಂ 7411226806 ಹಾಗೂ ಹೂಲಿಅಕಟ್ಟಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮೋ ನಂ 7026223373 ಗೆ ಸಂಪರ್ಕಿಸಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತಯುಳ್ಳ ವಿದ್ಯಾರ್ಥಿಗಳು ಜು.31 2023 ರ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ವಸತಿ ಶಾಲೆಗೆ ಅರ್ಜಿಗಳನ್ನ ಸಲ್ಲಿಸಬಹುದಾಗಿದೆ..
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಾರ್ಯಾಲಯ, ಮೌಲಾನಾ ಆಜಾದ್, ಅಲ್ಪಸಂಖ್ಯಾತರ ಭವನ, ಕೆ.ಎಸ್.ಸಿ.ಎ ಕ್ರಿಕೇಟ್ ಕ್ರೀಡಾಂಗಣ ಎದುರುಗಡೆ, ರಾಮತೀರ್ಥ ನಗರ, ಹಾಗೂ ದೂರವಾಣಿ ಸಂಖ್ಯೆ: 0831-2950349 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..