ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು..

ಬೆಂಗಳೂರು; ಮಾಡೆಲ್ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಾಡೆಲ್‌ನ ಡೈರಿಯಲ್ಲಿ ಸ್ಫೋಟಕ ಮಾಹಿತಿ ಪತ್ತೆಯಾಗಿದೆ.
ಮಾಡೆಲ್ ಆತ್ಮಹತ್ಯೆಯ ಹಿಂದೆ ಫೇಸ್ಬುಕ್ ಪ್ರಿಯಕರನಿಂದ ಲವ್, ಸೆಕ್ಸ್, ದೋಖಾ ಆಗಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ.ಮಾಡೆಲಿಂಗ್ ಜೊತೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ವಿದ್ಯಾಶ್ರೀ ಜುಲೈ 21,20223ರಂದು ಬೆಂಗಳೂರಿನ ಕೆಂಪಾಪುರ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ವಿದ್ಯಾಶ್ರೀ ಬರೆದಿಟ್ಟಿರುವ ಡೈರಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಆಕೆ ತನ್ನ ಸಾವಿಗೆ ಪ್ರಿಯಕರ ಅಕ್ಷಯ್ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಫೇಸ್ ಬುಕ್ ಮೂಲಕ ಪರಿಚಯನಾದ ಜಿಮ್ ಟ್ರೇನರ್ ಅಕ್ಷಯ್ ಎಂಬಾತನೊಂದಿಗಿನ ಸ್ನೇಹ, ಪ್ರೀತಿವರೆಗೂ ತಿರುಗಿದೆ. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರ ಮಧ್ಯೆ ಮೂರು ತಿಂಗಳ ಹಿಂದೆ ಬಿರುಕುಂಟಾಗಿದೆ. ಅಕ್ಷಯ್ ತನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿದ್ದ ವಿದ್ಯಾಶ್ರೀಗೆ ಆತ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾಗಿದೆ.
ಆತನಿಗಾಗಿ ಸಾಕಷ್ಟು ಹಣವನ್ನು ನೀಡಿದ್ದ ವಿದ್ಯಾಶ್ರೀ, ವಾಪಸ್ ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ವಿದ್ಯಾಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದೀಗ ವಿದ್ಯಾಶ್ರೀ ಪೋಷಕರು ದೂರು ನೀಡಿದ್ದು, ಆರೋಪಿ ಅಕ್ಷಯ್ ಅನ್ನು ಬಂಧಿಸಿ, ಆತನ ವಿರುದ್ಧ ಕಿರುಕುಳ, ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಿಸಿದ್ದಾರೆ.