Belagavi News In Kannada | News Belgaum

ಅಧ್ಯಕ್ಷ ಸ್ಥಾನಕ್ಕೆ ಗಿರಿಜಾ ಬಸಪ್ಪ ಮೋದಗಿ, ಜೈತುನಬಿ ಸುಭಾನಿ ದೇವಲಾಪೂರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಸನಗೌಡಾ ಮಡ್ಡೆಪ್ಪಗೌಡಾ ಪಾಟೀಲ, ಚಂದ್ರಗೌಡಾ ಬಸನಗೌಡಾ ಪಾಟೀಲ ನಾಮಪತ್ರ ಸಲ್ಲಿಕೆಯಾಗಿದ್ದವು.

ಬೈಲಹೊಂಗಲ-ತಾಲೂಕಿನ ಬೈಲವಾಡ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ್ಯೆಯಾಗಿ ಗಿರಿಜಾ ಬಸಪ್ಪ ಮೋದಗಿ, ಉಪಾಧ್ಯಕ್ಷರಾಗಿ ಬಸನಗೌಡಾ ಮಡ್ಡೆಪ್ಪಗೌಡಾ ಪಾಟೀಲ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಗಿರಿಜಾ ಬಸಪ್ಪ ಮೋದಗಿ, ಜೈತುನಬಿ ಸುಭಾನಿ ದೇವಲಾಪೂರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಸನಗೌಡಾ ಮಡ್ಡೆಪ್ಪಗೌಡಾ ಪಾಟೀಲ, ಚಂದ್ರಗೌಡಾ ಬಸನಗೌಡಾ ಪಾಟೀಲ ನಾಮಪತ್ರ ಸಲ್ಲಿಕೆಯಾಗಿದ್ದವು.
ಒಟ್ಟು 11 ಗ್ರಾ.ಪಂ. ಸದಸ್ಯರಲ್ಲಿ ಇಬ್ಬರು ಗೈರಾಗಿದ್ದರು.

 

ಉಳಿದ ಒಂಬತ್ತು ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಿರಿಜಾ ಬಸಪ್ಪ ಮೋದಗಿ ಇವರಿಗೆ 6 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸನಗೌಡಾ ಮಡ್ಡೆಪ್ಪಗೌಡಾ 6 ಮತ ಪಡೆದು ಆಯ್ಕೆಗೊಂಡರು.

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಜೈತುನಬಿ ಸುಭಾನಿ ದೇವಲಾಪೂರ 3 ಮತ ಪಡೆದು ಅದರಲ್ಲಿ 1 ಮತ ತಿರಸ್ಕಾರವಾಗಿತ್ತು. ಉಪಾಧ್ತಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ ಚಂದ್ರಗೌಡಾ ಬಸನಗೌಡಾ ಮುದಕನಗೌಡರ 3 ಮತ ಪಡೆದು ಪರಾಭವಗೊಂಡರೆಂದು ಚುನಾವಣಾಧಿಕಾರಿ ಡಾ.ಶ್ರೀಕಾಂತ ಗಾಂವಿ ತಿಳಿಸಿದ್ದಾರೆ.

ಗ್ರಾ ಪಂ ಸದಸ್ಯರಾದ ಮಂಜುನಾಥ ಹುಚ್ಚನವರ, ಸುಧಾ ಮರಶೆಟ್ಟಿ, ಶಿವಲಿಂಗಪ್ಪ ಹಿರೇಗೌಡರ, ಶ್ರೀಶೈಲ ಪಾಟೀಲ, ಶಿವಲೀಲಾ ಹೂಗಾರ, ಕಸ್ತೂರಿ ಮೇಲಿನಮನಿ, ಕಮಲವ್ವ ಪೂಜೇರ, ಪಿಡಿಓ ಶಿವಲೀಲಾ ಯರಗಟ್ಟಿ ಮುಂತಾದವರು ಇದ್ದರು.

ಗ್ರಾ ಪಂ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಗ್ರಾ ಪಂ ಅಧ್ಯಕ್ಷ್ಯೆಯಾಗಿ ಆಯ್ಕೆ ಮಾಡಿದ್ದು ನಾನು ಅವರಿಗೆ ಚಿರಋಣಿಯಾಗಿದ್ದೇನೆ. ಬೈಲವಾಡ ಮತ್ತು ಯರಡಾಲ ಗ್ರಾಮದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು. –ಗಿರಿಜಾ ಮೋದಗಿ, ಗ್ರಾ.ಪಂ.ಅಧ್ಯಕ್ಷ್ಯೆ. ಬೈಲವಾಡ
27ಬಿಎಲ್‍ಎಚ್2
ಗ್ರಾ.ಪಂ ನಡೆದ ಚುನಾವಣೆಯಲ್ಲಿ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅವರ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದು ಮಾದರಿ ಪಂಚಾಯತ ಮಾಡಲು ಪ್ರಯತ್ನಿಸುತ್ತೇನೆ. –
ಬಸನಗೌಡಾ ಪಾಟೀಲ, ಗ್ರಾ.ಪಂ ಉಪಾಧ್ಯಕ್ಷ ಬೈಲವಾಡ