ಕೆರೆನೀರು ತುಂಬುವ ನೀರಿನ ಘಟಕಕ್ಕೆ ಭೆಟ್ಟಿ,
ಯೋಜನೆಗೆ ಸಾರ್ವಜನಿಕರು ಸಹಕಾರ ನೀಡಿ :ಶಾಸಕ ನಿಖಿಲ್ ಕತ್ತಿ

ಹುಕ್ಕೇರಿ: ಹಿರಣ್ಯಕೇಶಿ ನದಿಗೆ ಸಂಕೇಶ್ವರ ಹತ್ತಿರ ನಿರ್ಮಿಸಿರುವ ಪಂಪಹೌಸದಿಂದ ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕಿನ 32 ಕೆರೆಗೆ ನೀರು ತುಂಬುವ ಕೆರೆಗೆ ಯೋಜನೆಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ಅವರು ಶುಕ್ರವಾರ ಸಂಕೇಶ್ವರದ ಜಾಕ್ ವೆಲ್ ಬೆಟ್ಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಕೆರೆಗಳಿಗೆ ಸರಾಗವಾಗಿ ನೀರು ಹೋಗುವಂತೆ ನೋಡಿಕೊಳ್ಳಬೇಕು
ಹುಕ್ಕೇರಿ ತಾಲೂಕಿನಲ್ಲಿ ತಾಲೂಕಿನಲ್ಲಿ ಹಿರಣ್ಯಕೇಶಿ ನದಿಯಿಂದ ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಪ್ರಸಕ್ತ ಹಂಗಾಮಿನಲ್ಲಿ ಚಾಲನೆ ನೀಡಿ 15 ದಿನವಾದರೂ ಕಳೆದರೂ ಕೆರೆಗಳಿಗೆ ನೀರು ತಲುಪಿಲ್ಲ ಎಂದರೆ ಏನು ಅರ್ಥ ಹಾಗೂ ಅನಧಿಕೃತವಾಗಿ ಪೈಪ್ ಲೈನ್ ಹೊಡೆದು ದುರ್ಬಳಕೆ ಮಾಡಿಕೊಳ್ಳುವುದು ಕಂಡುಬಂದಲ್ಲಿ ಅಂಥವರ ಮೇಲೆ ನಿರ್ಧಾಕ್ಷಣ್ಯ ಕ್ರಮಕ್ಕಾಗಿ ಸೂಚಿಸಿದರು. ರೈತರೇ ಪೈಪ್ ಒಡೆದರೆ ಮುಂದಿನ ರೈತರಿಗೆ ಯೋಜನೆ ಮುಟ್ಟೋದು ಹೇಗೆ ಎಂದರು.
ಹಿರಣ್ಯಕೇಶಿ ನದಿಯಿಂದ ಕ್ಷೇತ್ರದ 32 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೈತರ ಗೋಸ್ಕರ ನಮ್ಮ ತಂದೆ ಉಮೇಶ ಕತ್ತಿ ಅವರು ಸರ್ಕಾರದ ಮೇಲೆ ಒತ್ತಡ ಹಾಕಿ ಮಂಜೂರಾತಿ ಮಾಡಿಕೊಂಡು ಸಮರ್ಪಕವಾಗಿ ಅನುμÁ್ಠನ ಗೊಳಿಸಿದ್ದಾರೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ನೀರಾವರಿ ಇಲಾಖೆಯ ಕಾರ್ಯಕಾರಿ ಅಭಿಯಂತರ ಎಸ್.ಎಸ್.ಕರಗಾರ, ಎಸ್ ಪೂಜಾರಿ ಸಾದಿಕ್ ಮುಲ್ಲಾ ಚಂದ್ರು ಚೌಗಲಾ ಮುಖಂಡರಾದ ಅಪ್ಪಾಸಾಹೇಬ ಶಿರಕೋಳಿ, ಶ್ರೀಕಾಂತ ಹತನೂರೆ, ಪುರಸಭೆ ಉಪಾಧ್ಯಕ್ಷ ಅಜೀತ ಕರಜಗಿ, ಪರಗೌಡ ಪಾಟೀಲ,ಬಸವರಾಜ ಸುಭಾಷ ಗಂಗನ್ನವರ, ಮತ್ತಿತರು ಉಪಸ್ಥಿತರಿದ್ದರು.