Belagavi News In Kannada | News Belgaum

ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್​ನಿಂದ ತುರ್ತು ನೋಟಿಸ್​​.

ಬೆಂಗಳೂರು:   ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್​ ತುರ್ತು ನೋಟಿಸ್​ ನೀಡಿದೆ. ರಾಜ್ಯದ ಜನತೆಗೆ ಗ್ಯಾರಂಟಿಗಳ ಆಮೀಷ ನೀಡಿ ವಿಧಾನಸಭಾ ಚುನಾವಣೆ ಗೆದ್ದ ಆರೋಪ ಕೇಸ್​ನಲ್ಲಿ ಹೈಕೋರ್ಟ್​ ಸಿಎಂ ಸಿದ್ದರಾಮಯ್ಯ ಪರ ವಕೀಲರಿಗೆ ತುರ್ತು ನೋಟಿಸ್​​ ಕೊಟ್ಟು ವಿಚಾರಣೆಗೆ ಹಾಜರಾಗಿ ಎಂದಿದೆ..

ಕಳೆದ ಎರಡು ತಿಂಗಳ ಹಿಂದೆ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಗೆದ್ದು ಬೀಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಈಗ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್​ ಸರ್ಕಾರ ಒಂದರ ಮೇಲೊಂದರಂತೆ ಭರವಸೆಗಳನ್ನು ಈಡೇರಿಸುತ್ತಾ ಬರುತ್ತಲೇ ಇದೆ..

ಒಂದೆಡೆ ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಜಾರಿಗೆ ಮುಂದಾದರೆ, ಇನ್ನೊಂದೆಡೆ ವರುಣಾ ಮೂಲದ ಶಂಕರ್​​​ ಎಂಬುವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಆಮೀಷವೊಡ್ಡಿ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದಾರೆ..

ಸದ್ಯ ಶಂಕರ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​​ ನ್ಯಾ. ಸುನೀಲ್​​ ದತ್​ ಏಕಸದಸ್ಯ ಪೀಠ ಸಿಎಂ ಸಿದ್ದರಾಮಯ್ಯಗೆ ತುರ್ತು ನೋಟಿಸ್​ ಕೊಟ್ಟಿದೆ. ಜತೆಗೆ ಸೆಪ್ಟೆಂಬರ್​​ 1ನೇ ತಾರೀಕಿಗೆ ವಿಚಾರಣೆ ಮುಂದೂಡಿದೆ..