ಬೆಳಗಾವಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

ಬೆಳಗಾವಿ: ಬೆಳಗಾವಿ ಗಡಿಯಲ್ಲಿ ಪುಣೆಯ ಎಟಿಎಸ್ ನಿಂದ ಇಬ್ಬರು ಶಂಕಿತ ಉಗ್ರರನ್ನು ಅಂಬೋಲಿ ಬಳಿ ಬಂಧಿಸಲಾಗಿದೆ. ಮೊಹಮ್ಮದ್ ಇಮ್ರಾನ್ ಅಲಿಯಾಸ್ ಅಮಿರ್ ಖಾನ್, ಮೊಹಮ್ಮದ್ ಯೂಸುಫ್ ಯಾಕೂಬ್ ಸಾಕಿ ಬಂಧಿತರು..
ಕಳೆದ ವಾರ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದ ಪುಣೆ ಪೊಲೀಸರು ಇದೀಗ ಇಬ್ಬರನ್ನೂ ಬಂಧಿಸಿದ್ದಾರೆ. ಇಬ್ಬರು ಶಂಕಿತರು ನಿಪ್ಪಾಣಿ, ಸಂಕೇಶ್ವರ ಮೂಲಕ ಅಂಬೋಲಿ ಅರಣ್ಯಕ್ಕೆ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ.