Belagavi News In Kannada | News Belgaum

ಕೈದಿಗಳ ಮಾರಾಮಾರಿ ಕೊಲೆಗೆ ಯತ್ನ

ಬೆಳಗಾವಿ : ಹಿಂಡಲಗಾ ಜೈಲಿನಲ್ಲಿ ಕೈದಿಯಿಂದ ಮತ್ತೊಬ್ಬ ಕೈದಿಯ ಕೊಲೆಗೆ ಯತ್ನ,ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಕ್ರೂಡ್ರೈವರ್​ನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ..

 

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಓರ್ವ ಕೈದಿ ಸ್ಕ್ರೂಡ್ರೈವರ್​ನಿಂದ ಮತ್ತೊಬ್ಬ ಕೈದಿಗೆ ಐದು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ..

 

 

ಶಂಕರ ಭಜಂತ್ರಿ ಕೊಲೆ ಮಾಡಲು ಯತ್ನಿಸಿದ ಕೈದಿ. ಮಂಡ್ಯ ಮೂಲದ ಸಾಯಿಕುಮಾರ್​ ಗಾಯಗೊಂಡ ವಿಚಾರಣಾಧೀನ ಕೈದಿ. ಸಾಯಿಕುಮಾರ್​ ಅವರಿಗೆ ಎದೆ, ಹೊಟ್ಟೆ, ಕಿವಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯ ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

ಇನ್ನು ಜೈಲಿನಲ್ಲಿ ನಡೆದ ಈ ಘರ್ಷಣೆಯನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲಾಸ್ಪತ್ರೆ ಎದರು ಬಿಗಿ ಪೊಲೀಸ್​​ ಭದ್ರತೆ ನಿಯೋಜಿಸಲಾಗಿದೆ..