ಮರಿಕಟ್ಟಿ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ

ಬೈಲಹೊಂಗಲ : ತಾಲೂಕಿನ ಮರಿಕಟ್ಟಿ ಗ್ರಾಮ ಪಂಚಾಯತಿ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ಜರುಗಿದ್ದು, ಅಧ್ಯಕ್ಷರಾಗಿ ಮರೀಕಟ್ಟಿ ಗ್ರಾಮದ ವಿಠ್ಠಲ ಚಂದ್ರಪ್ಪ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. .
ಉಪಾಧ್ಯಕ್ಷ ‘ಅ’ ವರ್ಗ ಮಹಿಳೆಗೆ ಮೀಸಲಿಡಲಾಗಿತ್ತು. ಆದರೆ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸಿದ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಲಿಲ್ಲ. ಮರಿಕಟ್ಟಿ, ನಾವಲಗಟ್ಟಿ, ಪುಲಾರಕೊಪ್ಪ, ಶಿಗೀಹಳ್ಳಿ.ಕೆ.ಎಸ್. ಗಣಿಕೊಪ್ಪ ಗ್ರಾಮಗಳನ್ನು ಒಳಗೊಂಡಿರುವ ದೊಡ್ಡ ಗ್ರಾಮ ಪಂಚಾಯತಿ ಇದಾಗಿದೆ..
ಒಟ್ಟು ೧೯ ಸದಸ್ಯರನ್ನು ಹೊಂದಿರುವ ಮರಿಕಟ್ಟಿ ಗ್ರಾಪಂಗೆ ಸದಸ್ಯರಲ್ಲಿ ಅತೀ ಚಿಕ್ಕ ವಯಸ್ಸಿನ ವಿಠ್ಠಲ ತಳವಾರ ಆಯ್ಕೆ ಆಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಬಸವರಾಜ ಹಾಲಗಿ ಕಾರ್ಯನಿರ್ವಹಿಸಿದರು.