Belagavi News In Kannada | News Belgaum

ಹನಿಮೂನ್‌ಗೆ ಹೋಗಿದ್ದ ಮದುಮಗಳು ಪರಾರಿ; ಠಾಣೆ ಮೆಟ್ಟಿಲೇರಿದ ಮಧುಮಗ

ಪಾಟ್ನಾ: ಹೊಸದಾಗಿ ಮದುವೆಯಾದ ನವಜೋಡಿ ಹನಿಮೂನ್‌ಗೆ ಹೋಗೋದು ಕಾಮನ್. ಆದರೆ ಮಧುಚಂದ್ರಕ್ಕೆ ಹೊರಟ ಹುಡುಗನಿಂದ ಹುಡುಗಿ ತಪ್ಪಿಸಿಕೊಂಡು ಬಿಟ್ರೆ ಹೇಗಿರುತ್ತೆ. ಪಾಪ ಹನಿಮೂನ್ ಕನಸು ಕಂಡ ಆ ಮಧುಮಗ ಕಕ್ಕಾಬಿಕ್ಕಿ ಆಗುತ್ತಾನೆ. ಬಿಹಾರದಲ್ಲಿ ಇದೇ ರೀತಿಯ ಸಿನಿಮೀಯ ಘಟನೆಯೊಂದು ನಡೆದಿದೆ..

 

ಆಗಷ್ಟೇ ಮದುವೆಯಾದ ನವಜೋಡಿಯೊಂದು ಹನಿಮೂನ್‌ ಟ್ರಿಪ್‌ಗೆಂದು ನವದೆಹಲಿ-ನ್ಯೂ ಜಲ್ಪೈಗುರಿ ಸೂಪರ್‌ಫಾಸ್ಟ್ ರೈಲು ಹತ್ತಿದೆ. ಸೂಪರ್‌ ಫಾಸ್ಟ್‌ ರೈಲಿನ ಎಂಜಿನ್ ಸ್ಟಾರ್ಟ್‌ ಆಗುತ್ತಿದ್ದಂತೆ ಹುಡುಗಿ ನಾಪತ್ತೆಯಾಗಿದ್ದು, ಮಧುಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. .

 

ಕಳೆದ ಜುಲೈ 28ರಂದು ಬಿಹಾರದ ಕಿಶನ್‌ಗಂಜ್‌ ಜಿಲ್ಲೆಯಲ್ಲಿ ನವವಧು ನಾಪತ್ತೆಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಕಾಜಲ್ ಕುಮಾರಿ ನಾಪತ್ತೆಯಾದ ಯುವತಿ ಎನ್ನಲಾಗಿದೆ. ಕೆಲವೇ ದಿನಗಳಿಂದ ಮದುವೆಯಾಗಿದ್ದ ಕಾಜಲ್ ಕುಮಾರಿ ದಂಪತಿ ಡಾರ್ಜಲಿಂಗ್‌ಗೆ ಹನಿಮೂನ್ ಟ್ರಿಪ್ ಹೊರಟಿದ್ದಾರೆ..

 

ಮುಜಾಫರ್‌ಪುರ್‌ ರೈಲ್ವೆ ನಿಲ್ದಾಣದಲ್ಲಿ ನವದೆಹಲಿ- ನ್ಯೂ ಜಲ್ಪೈಗುರಿ ಸೂಪರ್‌ಫಾಸ್ಟ್ ರೈಲನ್ನು ಹತ್ತಿದ್ದಾರೆ. ಇವರಿಗೆ ಕೋಚ್ ನಂಬರ್ B4ನ ನಂಬರ್ 43 ಮತ್ತು 44 ಸೀಟ್‌ ಕೂಡ ಮುಂಗಡ ಬುಕ್ಕಿಂಗ್ ಮಾಡಲಾಗಿತ್ತು. ಈ ರೈಲಿನಲ್ಲೇ ನವವಧು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಲಾಗಿದೆ..

 

ಈ ಪ್ರಕರಣ ದಾಖಲಿಸಿರೋ ಬಿಹಾರ ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಕಾಜಲ್ ಕುಮಾರಿ ದಂಪತಿ ಕಳೆದ 6 ತಿಂಗಳ ಹಿಂದೆಯೇ ಮದುವೆಯಾಗಿದ್ದರು. ಕೌಟುಂಬಿಕ ಕಾರಣಗಳ ಹಿನ್ನೆಲೆ 6 ತಿಂಗಳಿಂದ ಹನಿಮೂನ್‌ಗೆ ಹೋಗಲು ಆಗಿರಲಿಲ್ಲ. ಇದೀಗ ಹನಿಮೂನ್‌ಗೆ ಹೊರಟಿದ್ದು ನವವಧುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.