ಅಂಕಲಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ.

ಹುಕ್ಕೇರಿ :ಅಂಕಲಿಯಲ್ಲಿ ಪಿಕೆಪಿಎಸ್ ಚುನಾವಣೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ. ದಿನಾಂಕ 30 /7/ 2023 ರಂದು ಜಿ ಆರ್ ಪಾಟೀಲ್ ಅವರ ಒಂದು ನೇತೃತ್ವದಲ್ಲಿ ನಡೆಯಿತು. 12 ಜನ ಸದಸ್ಯರಲ್ಲಿ ಮೂರು ಬಿನ್ ವಿರೋಧವಾಗಿ ಆಯ್ಕೆಯಾದರೂ. 9 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಿತು.
ಅದರಲ್ಲಿ ಎಂಟು ಸದಸ್ಯರು ಜಯಭೇರಿಗಳಿಸಿದರು. ನಂತರ ಮಾತನಾಡಿದ ಭರತ್ ಪುಂಡೆ ಅವರು ಜಿ ಆರ್ ಪಾಟೀಲ್ ಅವರು ಮಾತನಾಡಿದರು ಜಿ ಆರ್ ಪಾಟೀಲ್ ಅವರು ನಾವು ಐದು ವರ್ಷಗಳಲ್ಲಿ ಅಂಕಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದು .
ಆ ಸಂದರ್ಭದಲ್ಲಿ ರಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ಒಂದು ಸುಸಜ್ಜಿತವಾದ ಕಟ್ಟಡ,ಗೊಡಾವನ್ ಆಫೀಸ್ ಮಾಡಿದ ನಂತರ ವ್ಯವಸ್ಥಿತವಾಗಿ ಸಾಲ ವಿತರಣೆ ಮಾಡಿದೆವು.ನಮ್ಮ ಗ್ರಾಮಸ್ಥರು, ಸಹಕಾರಿ ಸಂಘದ ಸದಸ್ಯರು,ಅದೇ ರೀತಿ ಸಹೋದರ ಮಿತ್ರರು ಎಲ್ಲರೂ ಸೇರಿ ಅಂಕಲಿ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೋಸ್ಕರ ಮತ್ತೊಮ್ಮೆ ಚುನಾವಣೆಯನ್ನು ಗೆಲ್ಲಿಸಿಕೊಟ್ಟಿದ್ದಾರೆ .
ಅವರ ಏನು ಒಂದು ಆಶಾಭಾವನೆ ಇದೆ ಅವರಿಗೆ ನಾವು ವಿಶ್ವಾಸದ್ರೋಹ ಮಾಡುವುದಿಲ್ಲ ಇನ್ನು ಮುಂದಿನ ಐದು ವರ್ಷಗಳಲ್ಲಿ ಸಂಘದ ಗ್ರಾಮಸ್ಥರಿಗೆ ರೈತರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದರು ಈ ಒಂದು ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಎಸ್ಎಸ್ ಪಾಟೀಲ್ ಅವರು ಉಪಸ್ಥಿತರಿದ್ದರು.
ಈ ಒಂದು ಚುನಾವಣೆ ಯೆಲ್ಲಿ ಶ್ರೀ ಮಹದೇವ ಕಿಲ್ಲೆದಾರ,ಶಶಿಕಾಂತ್ ಸೂರ್ಯವಂಶಿ, ಅಂಗದ ಜರಳಿ, ಗಂಗಾಧರ್ ಪಾಟೀಲ್, ಕೇದರಿನಾಥ ಪವರ್, ಬಾಲಕೃಷ್ಣ ಘಸ್ತಿ, ಅಕ್ಕಾತಾಯಿ ಕೋಣೇರಿ, ಮಹಾದೇವಿ ಘೋಡಸೆ, ಕಲ್ಲಪ್ಪ ಪರೀಟ , ಅನಿಲ್ ಕೊಣಕೇರಿ, ಸಿದ್ದಲಿಂಗ ಸಾನೆ, ಭರತ ಪುಂಡೆ ಇವರು ಅಂಕಲಿ ಪಿಕೆಪಿಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದರು ಊರಿನ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರ