ಎಚ್‌ಪಿ ಶೋಭಾಯಾತ್ರೆ ವೇಳೆ ಕಲ್ಲುತೂರಾಟ ; ವಾಹನಗಳಿಗೆ ಬೆಂಕಿ.!

ವಿಶ್ವ ಹಿಂದೂ ಪರಿಷತ್ ಮತ್ತು ಮಾತೃಶಕ್ತಿ ದುರ್ಗಾ ವಾಹಿನಿಯಿಂದ ಸೋಮವಾರ ಬ್ರಜಮಂಡಲ ಯಾತ್ರೆ ಹೊರಡುವಾಗ ಹರಿಯಾಣದ ನುಹ್’ನಲ್ಲಿ ಕಲ್ಲುತೂರಾಟ ನಡೆಸಲಾಗಿದೆ..
ಪರಸ್ಪರ ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ ಸುಮಾರು 40ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಅನೇಕ ಜನರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ..
ಗುಂಡಿನ ದಾಳಿಯಿಂದ ಇಬ್ಬರು ಸಾವು ಕಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ.
ಇನ್ನು ಪರಿಸ್ಥಿತಿಯನ್ನು ನಿಭಾಯಿಸಲು ನುಹ್ ಜಿಲ್ಲಾಡಳಿತವು ಇತರ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿದೆ, ಜೊತೆಗೆ ಸೆಕ್ಷನ್ 144 ವಿಧಿಸುವುದರ ಜೊತೆಗೆ ಇಡೀ ಜಿಲ್ಲೆಯಲ್ಲಿ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ..
ಜಿಲ್ಲೆಯ ಗಡಿಗಳನ್ನು ಮುಚ್ಚಲಾಗಿದೆ. ಬ್ರಜಮಂಡಲ ಯಾತ್ರೆಯು ನುಹ್’ನಲ್ಲಿರುವ ನಲ್ಹಾದ್ ಶಿವ ದೇವಾಲಯದಿಂದ ಫಿರೋಜ್ಪುರ-ಜಿರ್ಕಾ ಕಡೆಗೆ ಹೊರಟಿತ್ತು..
ಯಾತ್ರೆ ತಿರಂಗಾ ಪಾರ್ಕ್ ಬಳಿ ತಲುಪುತ್ತಿದ್ದಂತೆಯೇ ಅಲ್ಲಿ ಜನರ ಗುಂಪು ಎದುರಾಯಿತು. ಎರಡೂ ಕಡೆಯುವರು ಮುಖಾಮುಖಿ ಆಗುತ್ತಿದ್ದಂತೆ ವಾಗ್ವಾದ ನಡೆದು ಕಲ್ಲು ತೂರಾಟ ಆರಂಭವಾಗಿತ್ತು.
ಸೋಮವಾರ ಮಧ್ಯಾಹ್ನ, ಮೊದಲ ಹಿಂಸಾಚಾರವು ತಿರಂಗಾ ಪಾರ್ಕ್ ಬಳಿ ಭುಗಿಲೆದ್ದಿತು. (ಏಜೇನ್ಸಿಸ್)