Belagavi News In Kannada | News Belgaum

550 ಕೆ.ಜಿ.ನಿಷೇಧಿತ ಪ್ಲ್ಯಾಸ್ಟಿಕ್ ವಶ; ವ್ಯಾಪಾರಸ್ಥರಿಗೆ ದಂಡ- ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ

 

ಬೆಳಗಾವಿ, ಆ.1: ನಗರದ ವ್ಯಾಪಾರ-ವಹಿವಾಟು‌ ಮಳಿಗೆಗಳ ಮೇಲೆ ದಾಳಿ‌ ನಡೆಸಿದ ಮಹಾನಗರ ಪಾಲಿಕೆಯ ಅಧಿಕಾರಿಗಳು ಸುಮಾರು 550 ಕೆ.ಜಿ. ನಿಷೇಧಿತ ಪ್ಲ್ಯಾಸ್ಟಿಕ್ ವಶಪಡಿಸಿಕೊಂಡು ದಂಡವನ್ನು ವಿಧಿಸಿದ್ದಾರೆ.

ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರ ನಿರ್ದೇಶನದಂತೆ ನಗರದಾದ್ಯಂತ ಪರಿಶೀಲನೆ ಕೈಗೊಂಡ ಅಧಿಕಾರಿಗಳು 550 ಕೆ.ಜಿ. ಪ್ಲ್ಯಾಸ್ಟಿಕ್ ವಶಪಡಿಸಿಕೊಂಡು 44,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ -2016 ಹಾಗೂ ತಿದ್ದುಪಡಿಯ ನಿಯಮ – 2022 ರಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರಾದ ಅಶೋಕ ದುಡಗುಂಟಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ 14 ಆರೋಗ್ಯ ನಿರೀಕ್ಷಕರು ಹಾಗೂ 2 ಪರಿಸರ ಅಭಿಯಂತರರು ಜೊತೆಗೆ ಎಇಇ (ಪರಿಸರ) ನೇತೃತ್ವದಲ್ಲಿ ಅನೇಕ ತಂಡಗಳು ಪರಿಶೀಲನೆ ನಡೆಸಿದರು.