ಹುಕ್ಕೇರಿಗೆ ನೂತನ ಸಿಪಿಐ ಮಹಾಂತೇಶ ಬಸಾಪುರ.

ಹುಕ್ಕೇರಿ : ರಾಜ್ಯದ ವಿವಿಧ ಕಡೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್(ಸಿವಿಲ್)ಗಳ ವರ್ಗಾವಣೆ ಪಟ್ಟಿ ಹೊರಬಿದ್ದಿದ್ದು ಅದರಂತೆ ಹುಕ್ಕೇರಿಗೆ ನೂತನ ವೃತ್ತ ನಿರೀಕ್ಷಕ(ಸಿಪಿಐ)ರನ್ನಾಗಿ ಮಹಾಂತೇಶ ಕಲ್ಲಪ್ಪ ಬಸಾಪುರ್ ಅವರನ್ನು ನೇಮಕ ಮಾಡಲಾಗಿದೆ..
ಸದ್ಯ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದ ಮಹಮ್ಮದರಫೀಕ್ ತಸೀಲ್ದಾರ ಅವರು ಹುಬ್ಬಳ್ಳಿ-ಧಾರವಾಡ ನಗರ ಠಾಣೆಗೆ ವರ್ಗಾಣೆಯಾದ ಪ್ರಯುಕ್ತ ತೆರವಾದ ಸ್ಥಾನಕ್ಕೆ ಮಹಾಂತೇಶ ಬಸಾಪುರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ..
ಇಲ್ಲಿಗೆ ಬರುವ ಮೊದಲು ಮಹಾಂತೇಶ ಬಸಾಪುರ್ ಅವರು ಬೆಳಗಾವಿ ನಗರ ಮಾರಿಹಾಳ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಹಾಂತೇಶ ಬಸಾಪುರ್ ಅವರನ್ನು ಹುಕ್ಕೇರಿ ಸಿಪಿಐಯನ್ನಾಗಿ ನೇಮಕ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ ಆದೇಶ ಹೊರಡಿಸಿದ್ದಾರೆ..