Belagavi News In Kannada | News Belgaum

ಕಿರುಕುಳಕ್ಕೆ ಸಾವಿನ ದಾರಿ ಹಿಡಿದ ಪತಿ

ಹಾಸನ: ಪತ್ನಿ ಹಾಗೂ ಆಕೆಯ ಪೋಷಕರಿಂದ ಕಿರುಕುಳದಿಂದ  ನೊಂದ ನವವಿವಾಹಿತ  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ  ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಕಿರಣ್ ಕೆ.ಬಿ.

ಆತ್ಮಹತ್ಯೆಗೆ  ಶರಣಾದ ನವವಿವಾಹಿತ. ಫೆಬ್ರವರಿ 19 ರಂದು ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬರನ್ನು ಪ್ರೀತಿಸಿ ಮದುವೆಯಾಗಿದ್ದರು..

 

ಕಿರಣ್ ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಗ್ರಾಮದವರು. ಉದಯಪುರದಲ್ಲಿಯೇ ಬೇಕರಿ ನಡೆಸಿಕೊಂಡ ಜೀವನದ ನೆಲೆ ಕಂಡುಕೊಂಡಿದ್ರು..

 

ಮದುವೆ ನಂತರ ಪತ್ನಿ ಸ್ಪಂದನಾ ಕಿರಣ್‌ಗೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಸ್ಪಂದನಾ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದರು. ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದರು ಎಂದು ಕಿರಣ್ ಪೋಷಕರು ಆರೋಪಿಸುತ್ತಾರೆ..