Belagavi News In Kannada | News Belgaum

ಸಂಕೇಶ್ವರ ಪುರಸಭೆಗೆ 666 ಮನೆ, ಕೊಳಗೇರಿ ಮುಕ್ತ ನಗರ : ಶಾಸಕ ನಿಖಿಲ್ ಕತ್ತಿ

 

ಹುಕ್ಕೇರಿ :  ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿಗಮದಿಂದ ಬಡ ಕುಟುಂಬಗಳಿಗೆ ಸಂಕೇಶ್ವರ ಪುರಸಭೆಗೆ 666 ನಿವೇಶನಗಳು ಮಂಜೂರಾಗಿದ್ದು ,ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕೆಂದು ಎಂದು ಶಾಸಕ ನಿಖಿಲ್ ಕತ್ತಿ ತಿಳಿಸಿದರು.

ಪಟ್ಟಣದ ಪುರಸಭೆಯಲ್ಲಿ ಅಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿ ಪಟ್ಟಣದಲ್ಲಿ ಗುಡಿಸಲು ಹಾಗೂ ಕೊಳೆಗೇರಿ ಮುಕ್ತ ನಗರವನ್ನಾಗಿಸಲು ಸ್ಲಂ ಬೋರ್ಡ್ ವತಿಯಿಂದ ಮಂಜೂರಾದ 666 ನಿವಾಸಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಶೀಘ್ರದಲ್ಲೇ ಅರ್ಜಿ ಸಲ್ಲಿಸುವಂತೆ ಅವರು ಮನವಿ ಮಾಡಿದರು .

ಪಟ್ಟಣದ ಐದು ಸ್ಲಂ ಪ್ರದೇಶಗಳ ಅರ್ಹರು ಅರ್ಜಿ ಸಲ್ಲಿಸಬೇಕು,ಸರಕಾರದ ನಿಯಮಾವಳಿ ಅನ್ವಯ ನಿವೇಶಗಳನ್ನ ಮಂಜೂರು ಮಾಡಲಾಗುವುದು.ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಜನರಿಗೆ ಸೂಕ್ತ ಮಾಹಿತಿ ನೀಡಿ ಸರಕಾರದ ಯೋಜನೆ ಲಾಭ ಪಡೆಯಲು ಶ್ರಮಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ತಿಳಿಸಿದರು .

ಗ್ರಾಮ ಒನ್ ಕೇಂದ್ರಗಳಲ್ಲಿ ರಾಜ್ಯ ಸರಕಾರದ ಯೋಜನೆಗಳ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿರುವುದು ಸರಿಯಲ್ಲ ,ಕ್ಷೇತ್ರದಲ್ಲಿ ಯಾರಾದರೂ ಹಣ ಪಡೆದು ಅರ್ಜಿ ಸಲ್ಲಿಸುತ್ತಿದ್ದರೆ ಅಂತವರ ಮೇಲೆ ಕ್ರಮ ಕೈಗೊಳಲಾಗುವುದು ಎಂದು ಖಡಕ್ ವಾನಿರ್ಂಗ್ ಮಾಡಿದರು.

ಗ್ರಾಮ ಒನ್ ಕೇಂದ್ರಗಳನ್ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ವಿಲೀನ ಮಾಡಿದರೆ ಸೂಕ್ತ ಎಂದು ಅವರು ಸಲಹೆ ನೀಡಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ,ಅಭಿಯಂತರ ಆರ್.ಬಿ.ಗಡಾದ,ಸದಸ್ಯರಾದ ಸಂಜಯ ಶಿರಕೊಳ್ಳಿ, ಅಜಿತ ಕರಜಗಿ,ಅಮರ ನಲವಡೆ, ವಿನೋದ ನಾಯಿಕ,ಪ್ರಮೋದ ಹೊಸಮನಿ, ಜಯಪ್ರಕಾಶ್ ಕರಜಗಿ, ಚಿದಾನಂದ ಕರ್ದನವರ ಸೇರಿದಂತೆ ಅನೇಕರು ಹಾಜರಿದ್ದರು.

ಸಂಕೇಶ್ವರ ಪಟ್ಟಣದಲ್ಲಿ ಚರಂಡಿಗಳ ಅಸ್ವಚ್ಛತೆಯ ಬಗ್ಗೆ ಪುರಸಭೆಯ ಸದಸ್ಯರಾದ ಡಾ! ಜಯಪ್ರಕಾಶ್ ಕರಜಗಿ ಅವರು ದ್ವನಿ ಎತ್ತಿದಾಗ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಹಾಗೂ ಕುಡಿಯುವ ನೀರು ಮತ್ತು ಚರಂಡಿ ಸ್ವಚ್ಛತೆ ಬಗ್ಗೆ ಪುರಸಭೆಯ ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿ ಶೀಘ್ರದಲ್ಲಿ ಸರಿಪಡಿಸಲು ಹೇಳಿದರು.