ವಿ ಟಿ ಯು ನ ಶಿವಗೊಂಡ ಪಾಟೀಲ್ ಅವರಿಗೆ ಪಿಎಚ್.ಡಿ.

ಬೆಳಗಾವಿ : ವಿ ಟಿ ಯು ನ ಶಿವಗೊಂಡ ಪಾಟೀಲ್ ಅವರಿಗೆ ಪಿಎಚ್.ಡಿ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ ಟಿ ಯು) ನ ಬೆಳಗಾವಿ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಎಂ ಸಿ ಎ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ. ಶಿವಗೊಂಡ ಪಾಟೀಲ್ ಅವರು ವಿ ಟಿ ಯು ನ ಮೈಸೂರು ಅಧ್ಯಯನ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಪಿ. ಸಂಧ್ಯಾ ಅವರ ಮಾರ್ಗದರ್ಶನದಲ್ಲಿ “ಡೆವಲಪಿಂಗ್ ಯಾನ್ ಅಸೋಸಿಯೇಷನ್ ಮಾಡೆಲ್ ಫಾರ್ ಜೀನ್ ಡಿಸೀಸ್ ಮ್ಯಾಪಿಂಗ್ ಅಂಡ್ ಐಡೆಂಟಿಫಿಕೇಷನ್ ಆಫ್ ಪೊಟೆನ್ಶಿಯಲ್ ಬಯೋಮಾರ್ಕರ್ಸ್ ಫಾರ್ ಅಲ್ಜೈಮರ್ ಡಿಸೀಸ್“ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿ ಟಿ ಯು ಪಿಎಚ್. ಡಿ. ಪ್ರದಾನ ಮಾಡಿದೆ. ಕಳೆದ ಮಂಗಳವಾರ ನಡೆದ ವಿ ಟಿ ಯು 23ನೇ ಘಟಿಕೋತ್ಸವದಲ್ಲಿ ಕುಲಪತಿಗಳಾದ ಮಾನ್ಯ ಪ್ರೊ ವಿದ್ಯಾಶಂಕರ್ ಅವರು ಪಿಎಚ್. ಡಿ. ಪದವಿಯನ್ನು ಪ್ರದಾನ ಮಾಡಿದರು.
Shri. Shivagonda Patil receives Ph.D. degree
Shri. Shivagonda Patil working as Assistant Professor at MCA department of VTU’s PG Center Belagavi awarded with Ph.D. degree by Visvesvaraya Technological University, Belagavi here on Tuesday 1st August, 2023 in 23rd Annual Convocation. He conducted a research and submitted a thesis on “Developing an association model for gene disease mapping and identification of potential biomarkers for Alzheimer’s disease” under the guidance of Dr. P. Sandhya working as Associate Professor at VTU’s PG Center Mysuru. Prof. S Vidyashankar Hon’ble Vice Chancellor of VTU awarded the Ph.D. certificate to him at 23rd Annual Convocation.