ಬೆಳಗಾವಿ: ಅಂಗನವಾಡಿ ಕಟ್ಟಡಗಳ ಬಾಡಿಗೆ ಬಾಕಿ ಹಣ ಬಿಡುಗಡೆಗೆ ಒತ್ತಾಯ

ಬೆಳಗಾವಿ: ಅಂಗನವಾಡಿ ಕೇಂದ್ರಗಳಿಗೆ ಹದಿನೈದು ತಿಂಗಳ ಬಾಕಿ ಇರುವ ಬಾಡಿಗೆ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ರಾಜ್ಯ ಅಂಗನವಾಡಿ ನೌಕರರ ಸಂಘ(ಸಂಸ್ಥೆ)ದ ವತಿಯಿಂದ ಪ್ರತಿಭಟಿಸಲಾಯಿತು..
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಜೈನೇಖಾನ್ ಮಾತನಾಡಿ, 30 ರಿಂದ 40 ವರ್ಷಗಳಿಂದ ಗೌರವಧನದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ನೌಕರರ ಜೀವನ ಕಷ್ಟಕರವಾಗಿದೆ. ಅಂಗನವಾಡಿ ಸರ್ಕಾರದ ಹಲವಾರು ಯೋಜನೆಗಳಲ್ಲಿ ಅಂಗನವಾಡಿ ನೌಕರರನ್ನು ದುಡಿಸಿಕೊಳ್ಳುತ್ತಿದ್ದಾರೆ..
ಅದನ್ನು ಪ್ರಶ್ನಿಸಿದರೆ ಕೆಲಸದಿಂದ ತೆಗೆದು ಹಾಕುತ್ತೇವೆಂದು ಅಧಿಕಾರಿಗಳು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.ಇತ್ತೀಚೆಗೆ ಬೆಳಗಾವಿಯ ದರ್ಬಾರ್ ಗಲ್ಲಿಯ ಅಂಗನವಾಡಿ ಕಾರ್ಯಕರ್ತೆ ಶಬಾನಾ ಎಂಬುವವರು ತಮ್ಮ ಕೊರಳಲ್ಲಿನ ಚಿನ್ನದ ಮಾಂಗಲ್ಯದ ಸರ ಒತ್ತೆ ಇಟ್ಟು ಬಾಡಿಗೆ ಹಣ ಕೊಟ್ಟಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷಿಮ್ಮ ಹೆಬ್ಬಾಳ್ಕರ್ ಜಿಲ್ಲೆಯಲ್ಲಿ ಈ ರೀತಿ ನಡೆದುಕೊಂಡಿರುವುದು ನಿಜಕ್ಕೂ ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು..
ಜಿಲ್ಲಾಧ್ಯಕ್ಷ ದೊಡ್ಡವ್ವ ಪೂಜಾರಿ ಮಾತನಾಡಿ, ಕಟ್ಟಡಗಳು ಇಲ್ಲದೆ ಗುಡಿ&ಗುಂಡಾರಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಾಗ ಬಾಡಿಗೆ ಕಟ್ಟಡ ಪಡೆದು ಅಂಗನವಾಡಿ ಕೇಂದ್ರ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, 15 ತಿಂಗಳಿನಿಂದ ಇಲಾಖೆಯಿಂದ ಬಾಡಿಗೆ ಹಣ ಬಂದಿಲ್ಲ..
ಈ ಕಟ್ಟಡದ ಜಾಗವನ್ನು ಖಾಲಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಅದನ್ನು ಅಧಿಕಾರಿಗಳು ಗಮನಕ್ಕೆ ತಂದರೆ “ದುಡ್ಡು ಬಂದ ಮೇಲೆ ಕೊಡುವುದಾಗಿದೆ ಇದೆಗೆ ಹೇಳಮ್ಮ’ ಎಂದು ಹೇಳಿದರು. ಇದರಿಂದ ಬಹಳಷ್ಟು ನಮಗೆ ತೊಂದರೆಯಾಗುತ್ತಿದೆ, ತಣವೇ ಬಾಡಿಗೆಗೆ ಹಣ ಪಡೆಯಬೇಕು ಎಂದು ಕೇಳಿದರು..
ಪ್ರತಿಭಟನೆಯಲ್ಲಿ ಗೋವರಿ ರಾಜಾಪುರೆ, ಮಂದಾ ನೇವಗಿ, ಸಂಧ್ಯಾ ಕುಲಕರ್ಣಿ, ಮೀನಾ ದಪಡೆ, ಸರಸ್ವತಿ ಮಾಳಶೆಟ್ಟಿ, ರೇಣುಕಾ ರೇಣುಕೇಗೌಡರ, ವಿಜಯಾ ಕಲಾದಗಿ ಸೇರಿದಂತೆ ಇತರರು ಇದ್ದರು.