ಬೆಳಗಾವಿ ಜಿಲ್ಲೆಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಅಡಿ: ಎರಡು ದಿನಗಳ ಕಾರ್ಯಗಾರ

ಬೆಳಗಾವಿ, ಆ.03 : ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರ ಸಮಗ್ರ ರೋಗಗಳ ನಿಯಂತ್ರಣದ ಬಗ್ಗೆ ನಿಗಾವಹಿಸುವದು, ಜ್ಜರಪ್ರಕರಣಗಳ ಪರಿಶೀಲನೆ, ಕ್ರಿಯಾಯೋಜನೆ ತಯಾರಿಸುವಲ್ಲಿ ಸಿಬ್ಬಂದಿಗಳಿಗೆ ಸಲಹೆ ನೀಡಿ ಎಂದು ಬೆಳಗಾವಿಯ ವಿಭಾಗೀಯ ಸಹ ನಿರ್ದೇಶಕರು ಡಾಕ್ಟರ್ ಶೋಭಾ ಮೂಲಿಮನಿ ಅವರು ಹೇಳಿದರು
ಬೆಳಗಾವಿ ಜಿಲ್ಲೆಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆ.1 ರಿಂದ ಆ.2 ರವರಗೆ ಏರ್ಪಡಿಸಲಾಗಿದ್ದ ಎರಡು ದಿನಗಳ ಕಾರ್ಯಗಾರದಲ್ಲಿ ಮಾತನಾಡಿದರು
ಮಲೇರಿಂiÀi ,ಡೆಂಗ್ಯೂ, ಚಿಕುನ್‍ಗುನಿಯಾ, ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ), ಂಇS, ಕಾಲಾ-ಅಜರ್, ಫೈಲೇರಿಯಾ ಮುಂತಾದ ಇತರ ರೋಗವಾಹಕ ಆಶ್ರಿತ ರೋಗಗಳು ಸೇರಿದಂತೆ ಮಲೇರಿಯಾ ಕುರಿತು ವಿಶೇಷ ತರಬೇತಿ ನೀಡಿದರು.
ಕೀಟಜನ್ಯ ರೋಗಗಳ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಪ್ರತಿಯೊಬ್ಬ ವೈದ್ಯಾಧಿಕಾರಿಗಳು ಕಾರ್ಯಕ್ರಮದ ಮಾರ್ಗಸೂಚಿ ಅನುಸಾರ ತರಬೇತಿ ಮುಗಿದ ನಂತರ ರಾಷ್ಷ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾಕ್ಟರ ಎಮ್.ಎಸ್.ಪಲ್ಲೇದ ಅವರು ಹೇಳಿದರು.
ತರಬೇತಿ ಅವಧಿಯಲ್ಲಿ, ವೈದ್ಯಾಧಿಕಾರಿಗಳಿಗೆ ಮಲೇರಿಯಾದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು, ಇದರಲ್ಲಿ ರಕ್ತದ ಸ್ಲೈಡ್ ಪರೀಕ್ಷೆ ಮತ್ತು ಖಆ ಕಿಟ್ ಪರೀಕ್ಷೆ, ಇಆಅಖಿ (ಆರಂಭಿಕ ರೋಗನಿರ್ಣಯ ಮತ್ತು ಸಂಪೂರ್ಣ ಚಿಕಿತ್ಸೆ), ಮಲೇರಿಯಾ ಚಿಕಿತ್ಸೆ, ಧೂಮೀಕರಣ, ಕೀಟನಾಶಕ ಸಿಂಪಡಣೆ, ಸೊಳ್ಳೆಪರದೆ ಐಐIಓ ನ ಸರಿಯಾದ ಬಳಕೆಯ ಪ್ರಾತ್ಯಕ್ಷಿಕೆ ಮತ್ತು ಲಾರ್ವಾಹಾರಿ ಮೀನುಗಳ ಮಾಹಿತಿ ಮತ್ತು ಮಲೇರಿಯಾ ವರದಿ ಮಾಡುವಿಕೆ, IಊIP ಯಲ್ಲಿ ಜ್ಜರ ಪ್ರಕರಣ ಸ್ವರೂಪವನ್ನು ಭರ್ತಿ ಮಾಡುವುದನ್ನು ಪ್ರಾಯೋಗಿಕ ಸೆಷನ್‍ಗಳಲ್ಲಿ ತಿಳಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳು, ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.