Belagavi News In Kannada | News Belgaum

ವಿಚಾರಣಾಧೀನ ಕೈದಿ ಎಸ್ಕೇಪ್

ಚಾಮರಾಜನಗರ: ಕೋರ್ಟ್‍ಗೆ ಕರೆದೊಯ್ಯುವಾಗ ವಿಚಾರಣಾಧೀನ ಕೈದಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ತಮಿಳುನಾಡಿನ ಹಾಸನೂರು ಬಳಿ ನಡೆದಿದೆ.

 

ಆರೋಪಿಯನ್ನು ಚಾಮರಾಜನಗರ ಉಪಕಾರಾಗೃಹದಿಂದ ತಮಿಳುನಾಡಿನ ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ಮೇಗಲಹುಂಡಿಯ ಸುರೇಶ್ (28) ಎಂಬಾತ ಪರಾರಿಯಾದ ವ್ಯಕ್ತಿ. ಹಾಸನೂರು ಬಳಿ ಟೀ ಕುಡಿಯುವ ವೇಳೆ ಆರೋಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

 

ಕಳ್ಳತನ ಪ್ರಕರಣಗಳಲ್ಲಿ ಬಂಧಿಯಾಗಿದ್ದ ಸುರೇಶ್ ಚಾಮರಾಜನಗರ ಜೈಲಿನಲ್ಲಿದ್ದ. ಆತನನ್ನು ತಮಿಳುನಾಡಿನ ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಕೋರ್ಟ್‍ಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಿಚಾರಣಾಧೀನ ಕೈದಿ ಸುರೇಶ್ ತಪ್ಪಿಸಿಕೊಂಡಿದ್ದಾನೆ. ಇದೀಗ ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.