ಮಹಾ ಮಳೆಯಿಂದ ಹದಗೆಟ್ಟ ಯರಗಣವಿ ಕೋ.ಶಿವಾಪೂರ ಮುಖ್ಯ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ ಶಶಿಧರ ಎಮ್ ಪಾಟೀಲ

ಮಹಾ ಮಳೆಯಿಂದ ಹದಗೆಟ್ಟ ಯರಗಣವಿ ಕೋ.ಶಿವಾಪೂರ ಮುಖ್ಯ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ
ಶಶಿಧರ ಎಮ್ ಪಾಟೀಲ
ಕೋ.ಶಿವಾಪೂರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿದೆ ಸಂಬದಿಸಿದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶ್ಯಾಪ ಹಾಕುತ್ತ ಗೋಳಾಡುತ್ತಿರುವುದು. ದೃಷ್ಯ ಇದು ಕಂಡು ಬರುವುದು ನೂತನ ಯರಗಟ್ಟಿ ತಾಲೂಕಿನಲ್ಲಿ ಬರುವ ಮಾಡಮಗೇರಿ, ಕೋ.ಶಿವಾಪೂರ ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಹಣೆಬರಹ ಇದಾಗಿದ್ದು ಜನಪ್ರತಿನಿಗಳು, ಅಧಿಕಾರಿಗಳು ಗ್ರಾಮದಲ್ಲಿನ ಕಾರ್ಯಕ್ರಮಗಳಿಗೆ ಇದೆ ರಸ್ತೆಯನ್ನು ಸಂಪರ್ಕಿಸುತ್ತಾರೆ ಕಂಡ್ರಿ ನೋಡಿಯೂ ನೋಡದ ಹಾಗೆ ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತದೆ ಇದಕ್ಕೆ ಬೆಸತ್ತು ಇಲ್ಲಿನ ಸಾರ್ವಜನಿಕರು ಯಾವಾಗ ರಸ್ತೆ ದುರಸ್ತಿ ಮಾಡಿಸುತ್ತಾರೆಂದು ಕಾದು ಕುಳತಿದ್ದಾರೆ.
ಈ ರಸ್ತೆಯ ಬದಿಯಲ್ಲಿ ನಿರ್ಮಿಸಿದ ಗಟಾರು ಮುಚ್ಚಿ ರಸ್ತೆಯ ಮೇಲೆ ನೀರು ನಿಂತು, ಬೃಹತ್ತಾಕಾರ ದೊಡ್ಡ ಡೊಡ್ಡ ತೆಗ್ಗು ಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರ ಮಾಡದಂತೆ ಅಡಚಣೆ ಉಂಟಾಗಿದೆ. ರಸ್ತೆ ಡಾಂಬರಿಕರಣ ಮಾಡಿದ್ದು ಸಂಪೂರ್ಣ ಕಿತ್ತು ತೆಗ್ಗು ಗುಂಡಿಗಳು ಬಿದ್ದು ಹಾಳಾಗಿದೆ.
ದಿನಂಪ್ರತಿ ಸಂಚಾರ ಮಾಡುವ ಸರಕಾರಿ, ಖಾಸಗಿ ವಾಹನ, ಶಾಲಾವಾಹನ, ಮುಂತಾದ ವಾಹನಗಳು ದಿನ ನಿತ್ಯ ಸಂಚರಿಸುವುದು ಈ ರಸ್ತೆಯೆ ಅನಿವಾರ್ಯ. ಮಳೆಗಾಲದಲ್ಲಿ ಸುರಿದ ಮಳೆಯಿಂದ ಅಲ್ಲಲ್ಲಿ ಮಾರುದ್ದ ತೆಗ್ಗು ಗುಂಡಿಗಳು ನಿತ್ಯ ಈ ಮಾರ್ಗದಲ್ಲಿ ದಿನ ನಿತ್ಯ ಸಂಚರಿಸುವ ವಾಹನಗಳ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚಾರ ಮಾಡುವಂತಾ ಸನ್ನಿವೇಶ ಉದ್ಬವಿಸಿದೆ. ಕೋಡಲೆ ಅಧಿಕಾರಿಗಳು ಪಶೀಲಿಸಿ ಜನಪ್ರತಿನಿಧಿಗಳು ರಸ್ತೆ ಪರಸ್ಥಿತಿ ನೋಡಿ ದುರಸ್ತಿ ಮಾಡಬೇಕು
ಗ್ರಾಮ ಪಂಚಾಯತಿ ಕೋ.ಶಿವಾಪೂರ ಸದಸ್ಯ : ಶ್ರೀಕಾಂತ ದೇಸಾಯಿ ರೈತರು ಟ್ಯಾಕ್ಟರ್ ಮುಖಾಂತರ ಕಬ್ಬು, ತರಕಾರಿ ಸಾಗಿಸುವಾಗ ಟ್ಯಾಕ್ಟರ್ ಪಲ್ಟಿಯಾಗಿ ಮತ್ತು ಬೈಕ್ ವಾಹನ ಸವಾರರು ಘಾಯಗೊಂಡ ಹಲವಾರು ಘಟನೆಗಳು ಸಂಭವಿಸಿವೆ ಶಿಘ್ರದಲ್ಲಿ ಅಧಿಕಾರಿಗಳು ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಎಚ್ಚರಿಸಿದ್ದಾರೆ.
ಲೋಕೋಪಯೋ ಎಇಇ ಸವದತ್ತಿ : ವಿಜಯ ಸಂಗಪ್ಪಗೋಳ
ಸ್ಥಳಕ್ಕೆ ಬೇಟಿನೀಡಿ ಸ್ಥಳ ಪರಶೀಲನೆ ಮಾಡಿ ಸರಕಾರಕ್ಕೆ ಪ್ರಸ್ಥಾವನೆ ಕಳಿಸಿ ಅನಮೋದನೆ ಪಡೆದು ಶೀಘ್ರವೇ ಕಾಮಗಾರಿ ಕೈಗೊಳ್ಳಲಾವುದು.