ನೀರು ಸರಬರಾಜು ಯೋಜನೆಯ ಪರಿಣಾಮಗಳ ಮೌಲ್ಯಮಾಪನ

ಬೆಳಗಾವಿ ; ಬೆಳಗಾವಿ ಮಹಾನಗರದಲ್ಲಿ ವಿಶ್ವ ಬ್ಯಾಂಕ್ ನೆರವಿನ, ಕರ್ನಾಟಕ ನಗರ ನೀರು ಸರಬರಾಜು ಅಧುನೀಕರಣ ಯೋಜನೆಯ ಅನುಷ್ಠಾನವು ಪ್ರಗತಿಯಲ್ಲಿದ್ದು, ಯೋಜನೆಯ ಪರಿಣಾಮಗಳ ಮೌಲ್ಯಮಾಪನ (Baseline survey for Impact Evaluation) ಕೈಗೊಳ್ಳುಲು ಒ/s ಅಥೆನಾ ಇನ್ಪೋನೋಮಿಸ್ ಪ್ರೈ.ಲಿ ಸಂಸ್ಥೆ ಆಯ್ಕೆಯಾಗಿದೆ ಎಂದು ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಕೆಯುಐಡಿಎಫ್‍ಸಿ -ಕುಸ್ಸೆಂಪ್ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಸದರಿ ಸಂಸ್ಥೆಯು ಧಾರವಾಡದ ಸೆಂಟರ್ ಫಾರ್ ಮಲ್ಟಿಡಿಸಿಪ್ಲಿನರಿ ಡೆವಲಪ್‍ಮೆಂಟ್ ರಿಸರ್ಚ್ ಸಂಸ್ಥೆ (CMDR. Dharwad) ಸಹಯೋಗದೊಂದಿಗೆ ಪ್ರಾತ್ಯಕ್ಷಿಕ (Demo Zone) ಹಾಗೂ ಪ್ರಾತ್ಯಕ್ಷಿಕವಲ್ಲದ(Non Demo Zone) ವಲಯಗಳಲ್ಲಿನ 3500 ಗ್ರಾಹಕರನ್ನು ಮತ್ತು 300 ವಾಣಿಜ್ಯ ಗ್ರಾಹಕರನ್ನು ಭೇಟಿ ಮಾಡಿ ನೀರು ಸರಬರಾಜು ಯೋಜನೆಯ ಸ್ಥಿತಿಗತಿಗಳಾದ ನೀರು ಸರಬರಾಜಿನ ಅಂತರ (ದಿನಗಳಲ್ಲಿ), ಗುಣಮಟ್ಟದ ನೀರು ಸರಬರಾಜು, ನಿರಂತರ ನೀರು ಸರ¨ರಾಜು, ನೀರಿನ ಪರ್ಯಾಯ ಮೂಲಗಳು, ಅಡುಗೆ ಮನೆಗೆ ನೇರವಾಗಿ ನೀರಿನ ಸಂಪರ್ಕ ಪಡೆದ ಬಗ್ಗೆ.
ನೀರಿನ ಅಭಾವ ಎದುರಿಸಲಾದ ಸಂದರ್ಭಗಳು, ಶೌಚಾಲಯ ಹೊಂದಿರುವವಿಕೆ, ನೀರಿನಿಂದ ಹರಡುವ ಕಾಯಿಲೆಗಳು ಸೇರಿದಂತೆ ಒಟ್ಟು 15 ವಿಭಾಗಗಳಲ್ಲಿ 120 ಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಆಯ್ಕೆಯಾದ ಕುಟುಂಬಗಳಿಂದ ಕೇಳಲಾಗುವುದು. ಸಮೀಕ್ಷೆಗೆ ಆಗಮಿಸುವ ಸಮೀಕ್ಷೆದಾರರು ಕೇಳುವ ಮಾಹಿತಿಯನ್ನು ಗ್ರಾಹಕರು ನೀಡಿ ಸಹಕರಿಸಬೇಕು.
ನೀರು ಸರಬರಾಜಿನ ಕೇತ್ರದಲ್ಲಿ ಮೊದಲ ಬಾರಿಗೆ ಸಮಗ್ರವಾಗಿ ವಿವಿಧ ಆಯಾಮಗಳಲ್ಲಿ ಕಂಡು ಬಂದಿರುವ ಅಂಶಗಳ ಬಗ್ಗೆ ಅಧ್ಯಯನ ಕೈಗೊಳ್ಳಲಾಗುವುದು. ನಗರದಲ್ಲಿ ಬರುವ ಆಯ್ದ ವಾಣಿಜ್ಯ ಸಂಪರ್ಕಗಳಿಂದ ನೀರು ಸರಬರಾಜಿನಿಂದ ಆಗಿರುವ ಅನುಕೂಲಗಳ ಹಾಗೂ ಮತ್ತಿತರ ಅಂಶಗಳ ಬಗ್ಗೆ ಮತ್ತು ನೀರು ಸರಬರಾಜು ಮಾಡುತ್ತಿರುವ ಸಂಸ್ಥೆಯ ಸುಧಾರಣೆಗೆ, ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆಯೂ ಸಹ ಅಧ್ಯಯನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.//