ಶ್ರಮದಿಂದಲೇ ಸಾಧನೆ ಸಾಧ್ಯ : ಶಿರೀಷ ಜೋಶಿ

ಬೆಳಗಾವಿ: ಇಲ್ಲಿನ ಬಿ. ಎ. ಸನದಿ ಸಾಂಸ್ಕøತಿಕ ಪ್ರತಿμÁ್ಠನದ ವತಿಯಿಂದ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಾಗೇಶ ನಾಯಕ ಅವರ “ಕಾಡುವ ಕವಿತೆಗಳು” ವಿಮರ್ಶಾ ಬರೆಹಗಳ ಸಂಕಲನವನ್ನು ಹಿರಿಯ ಸಾಹಿತಿ ಶಿರೀಷ ಜೋಶಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತ ಕಾಡುವ ಕವಿತೆಗಳನ್ನು ಹುಡುಕುವ ಮತ್ತು ಅದರ ಬಗ್ಗೆ ಬರೆಯುವುದು ಸಣ್ಣ ಕೆಲಸವಲ್ಲ. ಓದು ವಿಸ್ತಾರವಾಗಿ ಅಂತರಂಗ-ಬಹಿರಂಗಗಳು ಒಂದಾಗಿದ್ದರೆ ಮಾತ್ರ ಮನಸ್ಸನ್ನು ತಿಳಿಗೊಳಿಸುವ ಇಂತಹದೊಂದು ಕೃತಿ ಸೃಷ್ಟಿಯಾಗಬಲ್ಲದು. ಶ್ರಮದಿಂದಲೇ ಸಾಧನೆ ಸಾಧ್ಯವಾಗಿದ್ದು ನಾಗೇಶ ನಾಯಕರು ಮಾಡಿರುವ ಕಾರ್ಯ ಸಾಹಿತ್ಯಿಕವಾಗಿ ಬಹಳ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೃತಿ ಪರಿಚಯ ಮಾಡಿದ ಕವಯಿತ್ರಿ ಡಾ. ನಿರ್ಮಲ ಬಟ್ಟಲ ಹಿರಿಯ ಕವಿಗಳಿಂದ ಹಿಡಿದು ಹೊಸ ತಲೆಮಾರಿನ ಕವಿಗಳ ಕವಿತೆಗಳನ್ನು ವಿಮರ್ಶಿಸಿದ ಪರಿಯನ್ನು ಗಮನಿಸಿದರೆ ನಾಗೇಶ ನಾಯಕರ ಓದಿನ ವ್ಯಾಪ್ತಿ ಬೆರಗು ಹುಟ್ಟಿಸುತ್ತದೆ. ಓದುಗರ ಮನಸ್ಸನ್ನು ಗೆಲ್ಲಲು ಹತ್ತಾರು ಕೃತಿಗಳನ್ನು ರಚಿಸಬೇಕಾಗಿಲ್ಲ, ಒಂದೇ ಒಂದು ಗಟ್ಟಿ ಕವಿತೆ ಅಥವಾ ಬರೆಹ ಕವಿಯೊಬ್ಬನನ್ನು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಬಹುದಾಗಿದೆ. “ಕಾಡುವ ಕವಿತೆ” ಸಂಕಲನ ಅಂತಹ ಸಾಲಿಗೆ ಸೇರುವಂಥದ್ದು ಎಂದು ಹೇಳಿದರು. ಜೊತೆಗೆ “ಕಾಡುವ ಕವಿತೆ” ಸಂಕಲನದಲ್ಲಿ ತಮಗೆ ಕಾಡಿದ ಕವಿತೆಗಳನ್ನು ಓದಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎ. ಎ. ಸನದಿ ಮಾತನಾಡಿ ಸಂಕಲನದಲ್ಲಿ ವಿಮರ್ಷಿಸಲ್ಪಟ್ಟ ಐವತ್ತೂ ಕವಿತೆಗಳು ಬೆರಗು ಹುಟ್ಟುಸುವಂತಿವೆ. ನಾಗೇಶ ನಾಯಕ ಕಾಡುವ ಕವಿತೆಗಳ ವಿಮರ್ಶೆಯನ್ನು ನಿಲ್ಲಿಸದೇ ಮುಂದುವರೆಸಬೇಕೆಂದು ಆಗ್ರಹಿಸಿದರು.
ಕೃತಿಕಾರ ನಾಗೇಶ ನಾಯಕ ಮಾತನಾಡಿ ವಿವಿಧ ಕವಿಗಳ ಕವಿತೆಗಳನ್ನು ವಿಮರ್ಷಿಸಿದ ಸಂದರ್ಭಗಳನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಬಸವರಾಜ ಗಾರ್ಗಿಯವರನ್ನು ಸನ್ಮಾನಿಸಲಾಯಿತು.
ವಿಠ್ಠಲ ತಡಸಲನೂರ, ಕಾರ್ಯಪಾಲಕ ಅಭಿಯಂತರರು ಮತ್ತು ಬಸವರಾಜ ಗೌಡಪ್ಪ ಬಿಲ್ ಶಿವಣ್ಣವರ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕವಿಗಳಾದ ಮಲ್ಲಿಕಾರ್ಜುನ ಛಬ್ಬಿ ಮತ್ತು ನದೀಮ ಸನದಿ ಕಾಡುವ ಕವಿತೆ ಸಂಕಲನದಲ್ಲಿ ವಿಮರ್ಷಿಸಲ್ಪಟ್ಟ ತಮ್ಮ ಕವಿತೆಗಳನ್ನು ಓದಿದರು. ಕವಯಿತ್ರಿ ಆಶಾ ಯಮಕನಮರಡಿ ಪ್ರಾರ್ಥನಾ ಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಆರ್. ಬಿ. ಬನಶಂಕರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸುನಂದ ಮುಳೆ, ಅಕಬರ ಸನದಿ, ಸಿದ್ದಣ್ಣ ಕುರುಬರ, ಮದನ ಕಣಬೂರ, ಮಾಲಾ ಅಕ್ಕಿಶೆಟ್ಟಿ, ಪೆÇ್ರ. ಇಂದಿರಾ ಹೋಳ್ಕರ್ ಮತ್ತು ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.