Belagavi News In Kannada | News Belgaum

ಶಾಸಕನಿಂದ ಬೆದರಿಕೆ ಆರೋಪ; ಡೆತ್​ನೋಟ್​ ಬರೆದಿಟ್ಟು ಪ್ರಾಣಬಿಟ್ಟ ಗ್ರಾಪಂ​ ನೌಕರ

ಚಿತ್ರದುರ್ಗ: ಗ್ರಾಮ ಪಂಚಾಯತ್​ ನೌಕರನೋರ್ವ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಹೆಸರನ್ನು ಡೆತ್ ನೋಟ್​​ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದಲ್ಲಿ ನಡೆದಿದೆ. ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ..

 

ತಿಪ್ಪೇಸ್ವಾಮಿ ಉಪ್ಪರಿಗೇನಹಳ್ಳಿ ಗ್ರಾ.ಪಂನಲ್ಲಿ ಕೆಲಸ ಮಾಡುತ್ತಿದ್ದು, ಡೆತ್​ ನೋಟ್​ನಲ್ಲಿ ತಾಲ್ಲೂಕು ಪಂಚಾಯತ್​ ಇಓ ಮೂಲಕ ಒತ್ತಡ ಹಾಕುತ್ತಿದ್ದರು. ಎಸ್ಸಿಗಳಿಗೆ ಮಾತ್ರ ಕೆಲಸಮಾಡಿಕೊಡು ಅಂತಾ ಪಿಡಿಓ ಮೂಲಕ ಹಿಂಸೆ ಮಾಡುತ್ತಿದ್ದರು. ವಿನಾಕಾರಣ ಶಾಸಕ ಎಂ ಚಂದ್ರಪ್ಪ ನಿನ್ನನ್ನ ಸಸ್ಪೆಂಡ್ ಮಾಡಿಸ್ತೀನಿ ಅಂತಾ ಬೆದರಿಸಿದ್ರು ಎಂದು ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ..

 

ಅದರ ಜೊತೆಗೆ ಉಪ್ಪರಿಗೇನಹಳ್ಳಿಯ ಮೋಹನ್ ಕುಮಾರ್, ಮೂರ್ತಿ, ಉಗ್ರಪ್ಪ, ರಾಜಪ್ಪ ಹಾಗೂ 30 ಜನ ಸ್ನೇಹಿತರ ಹೆಸರನ್ನೂ ತಿಪ್ಪೇಸ್ವಾಮಿ ಡೆತ್​ ನೋಟ್​ನಲ್ಲಿ ಬರೆದಿದ್ದಾರೆ. ಅವರು ತಮ್ಮನ್ನ ಬೆದರಿಸಿ ಖಾತೆ ಮಾಡಿಸಿಕೊಂಡಿದ್ದಾರೆ..

9449423143 ನಂಬರ್ ನಿಂದ ಶಿವಮೂರ್ತಿ ಅಂತಾ ಹೇಳುತ್ತಾ, 7760113201 ನಂಬರ್ ನಿಂದ ಪ್ರಸನ್ನ ಅಂತಾ ಹೇಳಿ ಖಾತೆ ಮಾಡಿಕೊಡುವಂತೆ ಪೀಡಿಸುತ್ತಿದ್ದಾರೆ. ಈ ಕುರಿತು ತಾಲ್ಲೂಕು ಪಂಚಾಯತ್​ ಇಓ ಮೇಲೆ ತನಿಖೆಯಾಗಬೇಕು. ಲಿಂಗಾಯತರು ಕೆಲಸ ಮಾಡುವುದು ಕಷ್ಟವಾಗುತ್ತಿದೆ ಎಂದು ಡೆತ್ ನೋಟಲ್ಲಿ ಬರೆದಿದ್ದಾರೆ.