Belagavi News In Kannada | News Belgaum

ಕೆ ವಿ ಜಿ ಬ್ಯಾಂಕ್ — ರಿಟೇಲ್ ಸಾಲದ ಪ್ರಸ್ತಾವನೆಗಳ ತ್ವರಿತ ವಿಲೇವಾರಿಗೆ ವಿಶೇಷ ಘಟಕ

ಬೆಳಗಾವಿ ; 07/08/2023 ಕೆ ವಿ ಜಿ ಬ್ಯಾಂಕ್ — ರಿಟೇಲ್ ಸಾಲದ ಪ್ರಸ್ತಾವನೆಗಳ ತ್ವರಿತ ವಿಲೇವಾರಿಗೆ ವಿಶೇಷ ಘಟಕ
ಗೃಹ ಸಾಲ ಮತ್ತು ವಾಹನ ಸಾಲ ಒಳಗೊಂಡ ರಿಟೇಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಮತ್ತು ಶಾಖೆಗಳಲ್ಲಿ ಸ್ವೀಕರಿಸಲ್ಪಡುವ ಅಂತಹ ಸಾಲದ ಪ್ರಸ್ತಾವನೆಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ರಿಟೇಲ್ ಸಾಲಗಳ ಸಂಸ್ಕರಣಾ ಕೇಂದ್ರವನ್ನು ಬೆಳಗಾವಿಯಲ್ಲಿ ಪ್ರಾರಂಭಿಸಿದೆ.

ಈ ಸಾಲ ತ್ವರಿತ ವಿಲೇವಾರಿ ಘಟಕವನ್ನು ಸೋಮವಾರ ಬ್ಯಾಂಕಿನ ಮಹಾ ಪ್ರಬಂಧಕ ಆರ್ ಟಿ ಕಾಂಬ್ಳೆ ಬೆಳಗಾವಿಯಲ್ಲಿನ ತಮ್ಮ ಬ್ಯಾಂಕಿನ ಪ್ರಾದೇಶಿಕ ಕಾರ್ಯಾಲಯದ ಪ್ರಾಂಗಣದಲ್ಲಿಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅವರು ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ, ಆಸ್ತಿ ಅಡಮಾನ ಸಾಲ ಮುಂತಾದ ರಿಟೇಲ್ ಸಾಲಗಳ ಪ್ರಸ್ತಾವನೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಿಕೊಡಲು ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

 

ಶಾಖೆಗಳು, ಮೊದಲ ಅವಶ್ಯಕ ಅಗತ್ಯ ದಾಖಲೆಗಳನ್ನು ಗ್ರಾಹಕರಿಂದ ಸಂಗ್ರಹಿಸುತ್ತವೆ ಮತ್ತು ಈ ಕೇಂದ್ರಕ್ಕೆ ರವಾನಿಸುತ್ತವೆ. ಈ ಕೇಂದ್ರಗಳು ಸಾಲ ಮಂಜೂರಾತಿ ಕಾರ್ಯವನ್ನು ತೀವ್ರಗೊಳಿಸಿ ಗರಿಷ್ಠ 3 ರಿಂದ 4 ದಿನಗಳ ಒಳಗಡೆ ಸಾಲ ಮಂಜೂರಿ ನೀಡುತ್ತವೆ ಎಂದು ಆರ್ ಟಿ ಕಾಂಬ್ಳೆ ತಿಳಿಸಿದರು. ಇದರಿಂದ ಗ್ರಾಹಕರ ಕಾಯುವ ಸಮಯ ಉಳಿಯುವುದಲ್ಲದೆ ಗ್ರಾಹಕರಿಗೆ ತಕ್ಷಣ ಸಾಲ ಪಡೆಯಲು ಅನುಕೂಲವಾಗುವುದು ಎಂದರು.

ಬ್ಯಾಂಕಿನ ರಿಟೇಲ್ ಸಾಲದ ಬಡ್ಡಿದರ ಅತ್ಯಂತ ಸ್ಪರ್ಧಾತ್ಮಕವಾಗಿದ್ದು ಸದ್ಯಕ್ಕೆ ಗೃಹ ಸಾಲದ ಮೇಲಿನ ಬಡ್ಡಿದರ 8.5 % ಆಗಿದೆ ಎಂದರು. ಪ್ರಸ್ತುತ ಈ ಘಟಕದ ಕಾರ್ಯವನ್ನು ಅನುಲಕ್ಷಿಸಿ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳ ಆಯ್ದ ಕೇಂದ್ರಗಳಲ್ಲಿ ಇಂತಹ ಘಟಕ ಸ್ಥಾಪಿಸಲಾಗುವುದು ಎಂದೂ ಅವರು ಹೇಳಿದರು.

ಬ್ಯಾಂಕಿನ ಬೆಳಗಾವಿ ಪ್ರಾದೇಶಿಕ ವ್ಯವಸ್ಥಾಪಕ ಎಮ್ ರಂಗಪ್ಪ ಸ್ವಾಗತಿಸಿದರು. ಬ್ಯಾಂಕಿನ ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ನಿರೂಪಿಸಿದರು. ಪ್ರಾದೇಶಿಕ ಕಾರ್ಯಾಲಯದ ಹಿರಿಯ ಪ್ರಬಂಧಕಿ ನಮಿತಾ ಸಂಗವೀಕರ್ ವಂದಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸಾಲಗಳ ವಿಭಾಗದ ಮುಖ್ಯ ಪ್ರಬಂಧಕ ಗಿರೀಶ ಗಬ್ಬೂರ, ತ್ವರಿತ ಸಾಲ ಘಟಕದ ವ್ಯವಸ್ಥಾಪಕ ಫರ್ವೇಜ್ ಮುಲ್ಲಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಫೆÇೀಟೋ ಶೀರ್ಷಿಕೆ: ರಿಟೇಲ್ ಸಾಲದ ಪ್ರಸ್ತಾವನೆಗಳ ತ್ವರಿತ ವಿಲೇವಾರಿಗಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಬೆಳಗಾವಿಯಲ್ಲಿ ಪ್ರಾರಂಭಿಸಿರುವ ರಿಟೇಲ್ ಸಾಲಗಳ ಸಂಸ್ಕರಣಾ ಕೇಂದ್ರವನ್ನು ಬ್ಯಾಂಕಿನ ಮಹಾ ಪ್ರಬಂಧಕ ಆರ್ ಟಿ ಕಾಂಬ್ಳೆ ಉದ್ಘಾಟಿಸಿದರು.