ʻಇಂಡಿಯಾ ಶೆಲ್ಟರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ʼ ಐಪಿಒ

Hubballi: ಆಗಸ್ಟ್ 7, 2023: ಹರಿಯಾಣದ ಗುರುಗ್ರಾಮ ಮೂಲದ ಚಿಲ್ಲರೆ ಕೇಂದ್ರಿತ ಅಗ್ಗದ ವಸತಿ ಹಣಕಾಸು ಕಂಪನಿಯಾದ ʻಇಂಡಿಯಾ ಶೆಲ್ಟರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ʼ ತನ್ನ ʻಮೊದಲ ಕರಡು ನೋಂದಣಿ ಹೇಳಿಕೆʼಯನ್ನು (“ಡಿಆರ್‌ಎಚ್‌ಪಿ”) ಭಾರತೀಯ ಭದ್ರತಾ ಪತ್ರಗಳ ವಿನಿಮಯ ಮಂಡಳಿಗೆ (‘ಸೆಕ್ಯೂರಿಟೀಸ್ ಎಕ್ಸ್ ಚೇಂಬ್ ಬೋರ್ಡ್ ಆಫ್ ಇಂಡಿಯಾ-ಸೆಬಿ)ಗೆ ಸಲ್ಲಿಸಿದೆ.
ಆರಂಭಿಕ ಷೇರು ಬಿಡುಗಡೆ(ಐಪಿಒ) ಮೂಲಕ 1800 ಕೋಟಿ ರೂ.ಗಳವರೆಗೆ ಈಕ್ವಿಟಿ ಷೇರುಗಳನ್ನು(ತಲಾ ₹ 5 ಮುಖಬೆಲೆ) ನೀಡುವ ಮೂಲಕ ಹಣವನ್ನು ಸಂಗ್ರಹಿಸಲು ಕಂಪನಿಯು ಯೋಜಿಸಿದೆ. ಈ ಕೊಡುಗೆಯು 1000 ಕೋಟಿ ರೂ.ಗಳ ಗಳವರೆಗಿನ ಈಕ್ವಿಟಿ ಷೇರುಗಳ ತಾಜಾ ಷೇರುಗಳ ಮಾರಾಟವನ್ನು (“ಫ್ರೆಶ್ ಇಶ್ಯೂ”) ಮತ್ತು 800 ಕೋಟಿ ರೂ.ಗಳವರೆಗಿನ ಮಾರಾಟಗಾರ ಷೇರುದಾರರ ಕೊಡುಗೆಯನ್ನು (“ಮಾರಾಟದ ಕೊಡುಗೆ”) ಒಳಗೊಂಡಿದೆ.
ಆರಂಭಿಕ ಷೇರು ಬಿಡುಗಡೆ ಮೂಲಕ ಕ್ರೋಡೀಕರಣವಾಗುವ ನಿವ್ವಳ ನಿಧಿಯನ್ನು ಕಂಪನಿಯು ಕೆಳಕಂಡ ಉದ್ದೇಶಗಳಿಗಾಗಿ ಬಳಸಲು ನಿರ್ಧರಿಸಿದೆ. – (i) ಮುಂದಿನ ಸಾಲಕ್ಕಾಗಿ ಭವಿಷ್ಯದ ಬಂಡವಾಳ ಅಗತ್ಯಗಳನ್ನು ಪೂರೈಸುವುದು; ಮತ್ತು (ii) ಸಾಮಾನ್ಯ ಸಾಂಸ್ಥಿಕ ಉದ್ದೇಶಗಳು.
ಮಾರಾಟಕ್ಕಿರುವ ಷೇರುಗಳಲ್ಲಿ ʻಕ್ಯಾಟಲಿಸ್ಟ್ ಟ್ರಸ್ಟಿಶಿಪ್ ಲಿಮಿಟೆಡ್ʼನಿಂದ (ಮ್ಯಾಡಿಸನ್ ಇಂಡಿಯಾ ಆಪರ್ಚುನಿಟೀಸ್ ಟ್ರಸ್ಟ್ ಫಂಡ್‌ನ ಟ್ರಸ್ಟಿಯಾಗಿ) 49.00 ದಶಲಕ್ಷ ರೂ. ವರೆಗಿನ ಈಕ್ವಿಟಿ ಷೇರುಗಳು; ಮ್ಯಾಡಿಸನ್ ಇಂಡಿಯಾ ಆಪರ್ಚುನಿಟೀಸ್ ನಿಂದ 2,945.00 ದಶಲಕ್ಷ ರೂ.ವರೆಗಿನ ಈಕ್ವಿಟಿ ಷೇರುಗಳು; ʻಮಿಯೋ ಸ್ಟಾರ್‌ರಾಕ್ʼನಿಂದ 784.00 ದಶಲಕ್ಷ ರೂ.ವರೆಗಿನ ಈಕ್ವಿಟಿ ಷೇರುಗಳು; ನೆಕ್ಸಸ್ ವೆಂಚರ್ಸ್ iii ಲಿಮಿಟೆಡ್‌ನಿಂದ 1,372.00 ದಶಲಕ್ಷ ರೂ.ವರೆಗಿನ ಈಕ್ವಿಟಿ ಷೇರುಗಳು; ನೆಕ್ಸಸ್ ಆಪರ್ಚುನಿಟಿ ಫಂಡ್ iii ಲಿಮಿಟೆಡ್‌ನ 2,205.68 ದಶಲಕ್ಷ ರೂ.ವರೆಗಿನ ಈಕ್ವಿಟಿ ಷೇರುಗಳು; ನೆಕ್ಸಸ್ ಆಪರ್ಚುನಿಟಿ ಫಂಡ್ ii ನಿಂದ 644.32 ದಶಲಕ್ಷ ರೂ.ವರೆಗಿನ ಈಕ್ವಿಟಿ ಷೇರುಗಳನ್ನು ಒಳಗೊಂಡಿದೆ. (ಒಟ್ಟಾರೆಯಾಗಿ, “ಷೇರುಗಳನ್ನು ಮಾರಾಟ ಮಾಡುವ ಹೂಡಿಕೆದಾರರು” ಅಥವಾ “ಮಾರಾಟ ಮಾಡುವ ಷೇರುದಾರರು”) (“ಮಾರಾಟಕ್ಕೆ ಇರುವ ಷೇರುಗಳು”).
ಮಾರುಕಟ್ಟೆ ನಿಯಂತ್ರಕ ಸಂಸ್ಥೆ ‘ಸೆಬಿ’ಗೆ ಸಲ್ಲಿಸಿದ ಮೊದಲ ಕರಡು ನೋಂದಣಿ ಹೇಳಿಕೆ (ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್) ಮೂಲಕ ಬಿಡುಗಡೆ ಮಾಡುವ ಈಕ್ವಿಟಿ ಷೇರುಗಳನ್ನು ಮುಂಬಯಿ ಷೇರು ಮಾರುಕಟ್ಟೆ(ಬಿಎಸ್ಇ) ಮತ್ತು ಭಾರತೀಯ ರಾಷ್ಟ್ರೀಯ ಷೇರು ಮಾರುಕಟ್ಟೆ(ಎನ್ಎಸ್ಇ)ಯಲ್ಲಿ ನೋಂದಾಯಿಸಲು ಕಂಪನಿಯು ಉದ್ದೇಶಿಸಿದೆ.
ʻಇಂಡಿಯಾ ಶೆಲ್ಟರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ʼ ಸಂಸ್ಥೆಯು ಬಿಡುಗಡೆ ಮಾಡಲು ಉದ್ದೇಶಿಸಿರುವ ಸಾರ್ವಜನಿಕ ಷೇರು ಮಾರಾಟಕ್ಕೆ(ಐಪಿಒ) ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಅಂಬಿಟ್ ಪ್ರೈವೇಟ್ ಲಿಮಿಟೆಡ್ ರನ್ನಿಂಗ್ ಲೀಡ್ ಮ್ಯಾನೇಜರ್‌ಗಳು.