ನೆಲಬಾಂಬ್ ಸ್ಫೋಟಿಸಿ ಕಾರು ಧ್ವಂಸ: ಏಳು ಮಂದಿ ದುರ್ಮರಣ

ಬಲೂಚಿಸ್ತಾನ: ವಾಹನವನ್ನು ಗುರಿಯಾಗಿಸಿಕೊಂಡು ಭಾರೀ ಸ್ಫೋಟ ಸಂಭವಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಯೂನಿಯನ್ ಕೌನ್ಸಿಲ್ ಅಧ್ಯಕ್ಷರು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ..
ಸೋಮವಾರ ರಾತ್ರಿ ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯಲ್ಲಿ ನೆಲಬಾಂಬ್ ಸ್ಫೋಟಿಸಲಾಗಿದೆ. ಬಲ್ಘಾತರ್ ಯುಸಿ ಅಧ್ಯಕ್ಷ ಇಶ್ತಿಯಾಕ್ ಯಾಕೂಬ್, ಮದುವೆ ಸಮಾರಂಭದಿಂದ ಹಿಂದಿರುಗುವಾಗ ವಾಹನವನ್ನು ಗುರಿಯಾಗಿಸಿಕೊಂಡು ಬ್ಲಾಸ್ಟ್ ಮಾಡಿದ್ದಾರೆ. ದುಷ್ಕರ್ಮಿಗಳು ರಿಮೋಟ್ ಸ್ಫೋಟಕ ಸಾಧನವನ್ನು ಹುದುಗಿಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ..
ವಾಹನವು ಬಲ್ಗಟಾರ್ ಪ್ರದೇಶದ ಚಕರ್ ಬಜಾರ್ ತಲುಪಿದ ತಕ್ಷಣ, ನೆಲಬಾಂಬ್ ಸ್ಫೋಟಿಸಲಾಯಿತು ಮತ್ತು ಏಳು ಜೀವಗಳು ಬಲಿಯಾದವು. ಮೃತರಲ್ಲಿ ಮೊಹಮ್ಮದ್ ಯಾಕೂಬ್, ಇಬ್ರಾಹಿಂ, ವಾಜಿದ್, ಫಿದಾ ಹುಸೇನ್, ಸರ್ಫರಾಜ್ ಮತ್ತು ಹೈದರ್ ಸೇರಿದ್ದಾರೆ..
ಸ್ಫೋಟದ ಹಿಂದೆ ಬಲೂಚ್ ಲಿಬರೇಶನ್ ಫ್ರಂಟ್ ಸಂಘಟನೆಯ ಕೈವಾಡವಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.